ಜಿಂಕೆ ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದವನ ಬಂಧನ !

0
145755

ಸೊರಬ: ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದುದನ್ನು ಅರಣ್ಯಾಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಓರ್ವನನ್ನು ಬಂಧಿಸಿರುವ ಘಟನೆ ನಡೆದಿದೆ.

ಆನವಟ್ಟಿ ವಲಯದ ತವನಂದಿ ಶಾಖೆಯ ಕೆರೆಕೊಪ್ಪ ಗ್ರಾಮದ ಸ.ನಂ.13ರ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮೋಹನಕುಮಾರ ಹಾಗೂ ಸೊರಬ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ ಬಸೂರ್ ರವರ ಮಾರ್ಗದರ್ಶನದಲ್ಲಿ ಆನವಟ್ಟಿ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದಾಗ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದ ಕೆರೆಕೊಪ್ಪ ಗ್ರಾಮದ ನಾರಾಯಣಪ್ಪ ಬಿನ್ ರಂಗಪ್ಪ ಈತನನ್ನು ಬಂಧಿಸಿ, ಸೊರಬ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇನ್ನುಳಿದ ಆರೋಪಿಗಳಾದ ಕೆರೆಕೊಪ್ಪ ವಾಸಿಗಳಾದ ಬೂದ್ಯಪ್ಪ ಬಿನ್ ಬಂಗಾರಪ್ಪ, ನಾಗಪ್ಪ ಬಿನ್ ಕೆರಿಯಪ್ಪ, ಆಸೀಫ್ ಬಿನ್ ಜೋಹರ್ ಅಲಿಸಾಬ್, ಫೈಜಾನ್ ಸಾಬ್ ಬಿನ್ ಆಸೀಪ್ ಸಾಬ್ ಎಂಬುವವರು ತಲೆಮರೆಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಜಿಂಕೆ ತಲೆ ಸೇರಿದಂತೆ 10 ಕೆ.ಜಿ. ಜಿಂಕೆ ಮಾಂಸ, ಎರಡು ಕತ್ತಿ, ಎರಡು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಆನವಟ್ಟಿ ವಲಯದ ವಲಯ ಅರಣ್ಯಾಧಿಕಾರಿ ಜಾವದ್ ಬಾಷಾ ಅಂಗಡಿ, ಡಿ.ವೈ.ಆರ್.ಎಫ್.ಓ ವೀರಭದ್ರಯ್ಯ, ಅರಣ್ಯ ರಕ್ಷಕರಾದ ಮುರಳಿ ಟಿ., ಉಮೇಶ ಬೇವಿನಗಿಡದ, ದೊಡ್ಡಬಸಯ್ಯ, ಇವರುಗಳು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here