ಜಿಲ್ಲಾಧಿಕಾರಿಗಳಿಂದ ಫಸಲ್ ಭೀಮಾ ಯೋಜನೆಯ ಪ್ರಚಾರಕ್ಕೆ ಚಾಲನೆ

0
154

ಚಿಕ್ಕಮಗಳೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ-2022ರ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಚಾಲನೆ ನೀಡಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ನೈಸರ್ಗಿಕ ವಿಪತ್ತಿನಿಂದಾಗಿ ಬೆಳೆ ನಷ್ಟ ಆದಲ್ಲಿ ರೈತರು ಫಸಲ್ ಭೀಮಾ ಯೋಜನೆಯಡಿಯಲ್ಲಿ ಪರಿಹಾರ ದೊರಕಿಸಿಕೊಳ್ಳಬಹುದು. ಅದಕ್ಕಾಗಿ ವಾರ್ಷಿಕ ವಿಮಾ ಮೊತ್ತವನ್ನು ಅವರು ಪಾವತಿಸಬೇಕು. ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಈ ಯೋಜನೆಯ ಬಗ್ಗೆ ಪ್ರಚಾರ ಮಾಡಲು ಮತ್ತು ರೈತರಿಗೆ ಯೋಜನೆಯ ಮಾಹಿತಿ ನೀಡಲು ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿದೆ.

ಸರ್ಕಾರವು ವಿವಿಧ ಬೆಳೆಗಳಿಗೆ ವಿವಿಧ ವಿಮಾ ದರ ನಿಗದಿ ಪಡಿಸಿ, ಜುಲೈ ಮತ್ತು ಆಗಸ್ಟ್ ತಿಂಗಳ ಒಳಗಾಗಿ ಪಾವತಿಸಲು ರೈತರಿಗೆ ಸೂಚಿಸಿದೆ. ಗ್ರಾಮ ಪಂಚಾಯತ ಮತ್ತು ಹೋಬಳಿ ಮಟ್ಟಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ. ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಉಪನಿರ್ದೇಶಕ ಮೋಹನ್‌ದಾಸ್, ತೋಟಗಾರಿಕೆ ಉಪನಿರ್ದೇಶಕ ವೇದಮೂರ್ತಿ, ಕೆ.ಆರ್ ಲೋಕೇಶ್, ಆಶಾ, ವೆಂಕಟೇಶ್ ಚೌಹಾಣ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here