23.2 C
Shimoga
Sunday, November 27, 2022

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ | ಜನಮಾರಕ ಯೋಜನೆಗಳು ಆಗದಂತೆ ಸಹಕರಿಸುವಂತೆ ಮನವಿ

ಸೊರಬ: ಚಂದ್ರಗುತ್ತಿ ಹೋಬಳಿಯ ಬಾಡದ ಬಯಲು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ತಹಶೀಲ್ದಾರ್ ಮೋಹನ್ ಭಸ್ಮೆ ಉದ್ಘಾಟಿಸಿ ಮಾತನಾಡಿ, ಗ್ರಾಮಸ್ಥರ ಬೇಡಿಕೆಯಂತೆ ಆಶ್ರಯ ನಿವೇಶನಕ್ಕೆ ಈಗಾಗಲೇ ಜಾಗವನ್ನು ಪರಿಶೀಲಿಸಿದ್ದೇವೆ, ಜನತೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಲ್ಲಿ ಇಲ್ಲಿ ಸಾಧ್ಯವಿರುವ ಎಲ್ಲಾ ಸಮಸ್ಯೆಗಳಿಗೂ ಇಲ್ಲಿಯೇ ಪರಿಹಾರ ನೀಡುತ್ತೇವೆ. ಕೆಲವೊಂದು ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ ಅರ್ಜಿಯನ್ನು ಕಳುಹಿಸಿ ಮಾಡಲಾಗುವುದು ಎಂದರು.

ಬಸ್ತಿಕೊಪ್ಪ ಗ್ರಾಮಸ್ಥರು ಕಲ್ಲು ಗಣಿಗಾರಿಕೆ ವಿರುದ್ಧ ಮನವಿ ಸಲ್ಲಿಸಿ, ಅಭಿವೃದ್ಧಿ ಹೆಸರಿನಲ್ಲಿ ವಿಪರೀತ ಕಲ್ಲು ಗಣಿಗಾರಿಕೆ ಕಾರ್ಯ ನಡೆಯುತ್ತಿದ್ದು. ಮಳೆತರುವ ರಕ್ಷಿತ ಅರಣ್ಯವೂ ಸೇರಿದಂತೆ ಕಾಡುಮೃಗಗಳ ಆವಾಸಕ್ಕೂ ಸಂಚಕಾರ ತಂದಿದೆ. ಗಣಿಗಾರಿಕೆಯ ದುಷ್ಪರಿಣಾಮ ನೇರ ಇಲ್ಲಿನ ಜನತೆಯ ಮೇಲೆ ಬೀರಿದ್ದು ಹಲವು ಕಾಯಿಲೆ ಕಸಾಲೆಗೆ ತುತ್ತಾಗಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಕುಡಿಯುವ ನೀರಿಗೆ ತೀವ್ರ ಅಡಚಣೆ ಉಂಟಾಗಿದೆ. ಈ ಎಲ್ಲಾ ಸಮಸ್ಯೆ. ಅದ್ವಾನಗಳ ಬಗ್ಗೆ ಈ ಹಿಂದೆ ಜಿಲ್ಲಾಧಿಕಾರಿ, ಗಣಿಗಾರಿಕೆ ಇಲಾಖೆ, ಪರಿಸರ ಸಂಘಟನೆಗಳ ಗಮನಕ್ಕೆ ತಂದಿದ್ದು ಖುದ್ದು ಜಿಲ್ಲಾಧಿಕಾರಿಗಳು ಆಗಮಿಸಿ ಜನರಿಗೆ ಮಾರಕವಾಗದಂತೆ ಗಣಿ ನಿಯಮದಂತೆ ನಡೆಸಲು ಗಣಿದಾರರಿಗೆ ಸೂಚಿಸಿದ್ದರು.

ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ 2026ರ ತನಕ ಗಣಿದಾರರಿಗೆ ಲೀಜ್ ಇರುವುದರಿಂದ ಅಲ್ಲಿಯವರೆಗೆ ಗಣಿಗಾರಿಕೆ ನಡೆಸಲು ಗ್ರಾಮ ಒಪ್ಪಿದೆ. ಆದರೆ ಇದೇ ಸನಂ 24ರಲ್ಲಿ ಮತ್ತೋರ್ವರಿಗೆ ಗಣಿಗಾರಿಕೆ ನಡೆಸಲು ಸರ್ಕಾರ ಆದೇಶ ನೀಡಿದ್ದು ಇಲ್ಲಿನ ಜನತೆಯ ಹಿತಾಸಕ್ತಿಯನ್ನು ಕಡೆಗಣಿಸಿದಂತಾಗಿದೆ ಅಷ್ಟೆ ಅಲ್ಲದೆ ಅಭಿವೃದ್ಧಿ ಹೆಸರಿನಲ್ಲಿ ಇನ್ನೊಂದೆಡೆ ಸಂಪೂರ್ಣ ನಾಶಪಡಿಸುವ ಅವೈಜ್ಞಾನಿಕ ಸಂವಿಧಾನ ಬಾಹಿರ ಯೋಜನೆಗೆ ಮುಂದಾಗಿದ್ದು ನಮಗೆ ತೀವ್ರ ಬೇಸರ ತಂದಿದೆ. ಇಂತಹ ಯೋಜನೆಗಳನ್ನು ಉಗ್ರವಾಗಿ ಖಂಡಿಸುತ್ತಿದ್ದು ತೀವ್ರ ಹೋರಾಟಕ್ಕೆ ಅಣಿಯಾಗುವುದು ಅನಿವಾರ್ಯವಾಗಿದೆ ಈ ಮೂಲಕ ತಮ್ಮ ಅವಗಾಹನೆಗೆ ತರುತ್ತ, ಕೂಡಲೆ ಇಂತಹ ಜನಮಾರಕ ಯೋಜನೆಗಳು ಆಗದಂತೆ ಸಹಕರಿಸಬೇಕು ಎಂದು ತಹಶೀಲ್ದಾರ್ ಅವರಿಗೆ ವಿನಂತಿಸಿದರು.

ಸುಮಾರು 9 ರಷ್ಟು ಅರ್ಹ ಫಲಾನುಭಾವಿಗಳಿಗೆ ಸಾಮಾಜಿಕ ಭದ್ರತೆ ಯೋಜನೆಯ ಮಾಶಾಸನ ಆದೇಶ ಮಂಜುರಾತಿ ಪತ್ರವನ್ನು ವಿತರಿಸಿದರು. ಗ್ರಾಮಸ್ಥರು ಹಲವು ಸಮಸ್ಯೆಗಳ ಕುರಿತು 173 ರಷ್ಟು ಮನವಿ ಸಲ್ಲಿಸಿದರು. ನಂತರ ತಹಶೀಲ್ದಾರ್ ಅವರು ಮನೆ ಮನೆಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ರತ್ನಾಕರ ಎಂ.ಪಿ, ಉಪಾಧ್ಯಕ್ಷ ಲಕ್ಷ್ಮಿ ಚಂದ್ರಪ್ಪ, ಸದಸ್ಯ ತಿರುಪತಿ, ಚಂದ್ರಗುತ್ತಿ ನಾಡಕಚೇರಿ ಉಪತಹಶೀಲ್ದಾರ್ ವಿಎಲ್ ಶಿವಪ್ರಸಾದ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಾಗೇಂದ್ರಪ್ಪ, ಗ್ರಾಂ.ಪಂ. ಮಾಜಿ ಉಪಾಧ್ಯಕ್ಷ ಪ್ರದೀಪ್, ತಾಪಂ ಸಹಾಯಕ ನಿರ್ದೇಶಕ ಶ್ರೀ ರಾಮ್, ಕೃಷಿ ಅಧಿಕಾರಿ ಶಂಕರ್, ಆರೋಗ್ಯ ಇಲಾಖೆ ಅಧಿಕಾರಿ ಸಾಹುಕಾರ್, ಸೇರಿದಂತೆ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಮೆಸ್ಕಾಂ ವಿಭಾಗ, ಗ್ರಾಮೀಣ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಧಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!