ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ | ಶರಾವತಿ ನಿರಾಶ್ರಿತರಿಗೆ ನೀಡಲಾದ ನಿವೇಶನ ಹಕ್ಕಿನ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಯಾವಾಗ ಸ್ವಾಮಿ ? ಗ್ರಾಮಸ್ಥರ ಆಕ್ರೋಶ

0
597

ರಿಪ್ಪನ್‌ಪೇಟೆ: ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತವಾಗಿರುವ ರೈತ ಕುಟುಂಬಕ್ಕೆ ಸರ್ಕಾರ ಈ ಹಿಂದೆ ಕೋಡೂರು ಗ್ರಾಮದ ಕುಸುಗುಂಡಿ ಸರ್ವೇ ನಂಬರ್ 10 ರಲ್ಲಿ ಮನೆ ನಿವೇಶನವನ್ನು ನೀಡಲಾಗಿದ್ದರೂ ಕೂಡಾ ಈವರೆಗೂ ಜಾಗ ತೋರಿಸದೆ ಸುಮಾರು 56 ಫಲಾನುಭವಿಗಳು ಮನೆ ಹಕ್ಕು ಪತ್ರಕ್ಕಾಗಿ ಅಲೆಯುವಂತಾಗಿದೆ.ಇನ್ನೂ ಗ್ರಾಮ ಪಂಚಾಯ್ತಿಯಿಂದ ನೀಡಲಾಗುವ ಕುಡಿಯುವ ನೀರಿನ ಸೌಲಭ್ಯ ಇದ್ದರೂ ಸಮರ್ಪಕ ನಿರ್ವಹಣೆ ಇಲ್ಲದೆ ಪರದಾಡುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಕುಸುಗುಂಡಿ ಬುಲ್ಡೊಜರ್‌ಗುಡ್ಡ ಕಾರಕ್ಕಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾರಕ್ಕಿ ಗ್ರಾಮದ ಬುಲ್ಡೋಜರ್ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಅಯೋಜಿಸಲಾದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮವನ್ನು ತಹಶೀಲ್ದಾರ್ ಎಸ್.ವಿ.ರಾಜೀವ್ ಉದ್ಘಾಟಿಸಿ ಮಾತನಾಡಿ, ಸರ್ಕಾರ ಜನರ ಬಳಿಗೆ ತೆರಳಿ ಜನರ ಮೂಲಭೂತ ಸಮಸ್ಯೆಗಳನ್ನು ಸ್ಥಳದಲ್ಲಿ ಪರಿಹರಿಸುವ ಮಹಾತ್ವಾಕಾಂಕ್ಷಿ ಯೋಜನೆಯಾದ ಹಲವು ಸರ್ಕಾರ ಜನಪರ ಕಾರ್ಯಕ್ರಮಗಳಾದ ಸಂದ್ಯಾಸುರಕ್ಷಾ,ವಿಧುವಾ ವೇತನ ಮನಸ್ವಿನಿ ಸಾಮಾಜಿಕ ಭದ್ರತಾಯೋಜನೆ ಅಂಗವಿಕಲ ವೇತನ ಸೇರಿದಂತೆ ಪೌತಿ ಬದಲಾವಣೆ ಖಾತೆ ಬದಲಾವಣೆ ಸರ್ಕಾರಿ ಅಕ್ರಮ ಜಮೀನು ತೆರವುಗೊಳಿಸುವುದು ಮತ್ತು ಬಿಪಿಎಲ್ ಕಾರ್ಡ್ ದೊರೆಯುತ್ತಿರುವ ಬಗ್ಗೆ ಖಾತರಿ ಪಡಿಸುವುದು. ಕಂದಾಯ ಗ್ರಾಮಗಳ ರಚನೆ, ದರಖಾಸ್ತು ಪೋಡಿ, ಪೋಡಿ ಮುಕ್ತ ಗ್ರಾಮ, ಹದ್ದುಬಸ್ತು, ಅತಿವೃಷ್ಠಿ ಅನಾವೃಷ್ಟಿ ಎದುರಿಸಲು ಮುಂಜಾಗ್ರತಾ ಕ್ರಮ, ಮತದಾರರ ಪಟ್ಟಿ ಪರಿಷ್ಕರಣೆ, ಎಸ್‌ಸಿ, ಎಸ್,ಟಿ ಬಿಸಿಎಂ ವಸತಿ ನಿಲಯಗಳಿದ್ದಲಿ ಭೇಟಿ ನೀಡಿ ಸುಸ್ಥಿತಿಯಲ್ಲಿರುವ ಬಗ್ಗೆ ಕ್ರಮ ವಹಿಸುವುದು. ಹೀಗ ಸರ್ಕಾರದ ಅಭಿವೃದ್ದಿ ಕಾರ್ಯಕ್ರಮಗಳಿಗೆ ಕಾಯಕಲ್ಪ ನೀಡುವುದು ಈ ಯೋಜನೆಯ ಗುರಿಯಾಗಿದೆ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ರೈತ ನಾಗರಿಕರಿಗೆ ವಿವರಿಸಿ ಮಧ್ಯವರ್ತಿಗಳಿಂದ ನಾಗರೀಕರು ನಿತ್ಯ ಕಛೇರಿಗೆ ಅಲೆದಂತೆ ನೇರವಾಗಿ ಸಂಬಂಧಪಟ್ಟ ಎಲ್ಲಾ ಇಲಾಕಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸ್ಥಳದಲ್ಲಿ ತಮ್ಮ ಸಮಸ್ಯೆಗೆ ಪರಿಹಾರ ಪಡೆಯಲು ಅವಕಾಶ ನೀಡಲಾಗಿದೆ ಎಂದರು.

ಕೋಡೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುನಂದಮ್ಮ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ.ಉಪಾಧ್ಯಕ್ಷ ಜಯಪ್ರಕಾಶ್‌ಶೆಟ್ಟಿ, ಸದಸ್ಯರಾದ ಅನ್ನಪೂರ್ಣ ಮಹೇಶ, ಯೋಗೇಂದ್ರ, ಶೇಖರಪ್ಪ, ರೇಖಾ, ಪ್ರೀತಿ, ಸವಿತಾ, ಮಂಜಪ್ಪ, ಸುಧಾಕರ, ಉಮೇಶ್, ಸರ್ವೇ ಇಲಾಖೆಯ ಅಧಿಕಾರಿಗಳು, ಆಹಾರ ನಿರೀಕ್ಷಕ ಬಾಲಚಂದ್ರ, ಉಪತಹಶೀಲ್ದಾರ್ ಹೆಚ್.ಟಿ.ಹುಚ್ಚರಾಯಪ್ಪ, ಸುಧೀರ್ ಕುಮಾರ್, ಶ್ರೀಕಾಂತ್, ಸಿಡಿಪಿಓ ಇಲಾಖೆಯ ಮೇಲ್ವಿಚಾರಕಿ ವನಮಾಲಾ, ಇನ್ನಿತರರು ಪಾಲ್ಗೊಂಡಿದ್ದರು.

ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಹಾಗೂ ಪೊಲೀಸ್ ಇಲಾಖೆಯ ಗೈರು ಹಾಜರಿ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ದಿನದಲ್ಲಿ ಕೇವಲ ಎರಡು ಗಂಟೆಯೂ ವಿದ್ಯುತ್ ಇರುವುದಿಲ್ಲ ನಾವುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಮೆಸ್ಕಾಂ ಇಲಾಖೆಯ ವಿರುದ್ಧ ಸಿಡಿಮಿಡಿಗೊಂಡರು.

ಪದ್ಮಾವತಿ ಪ್ರಾರ್ಥಿಸಿದರು. ಗ್ರಾಮ ಪಂಚಾಯ್ತಿ ಸದಸ್ಯ ಯೋಗೇಂದ್ರ ಸ್ವಾಗತಿಸಿದರು. ಉಪಾಧ್ಯಕ್ಷ ಜಯಪ್ರಕಾಶ್‌ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ನಿರೂಪಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here