ಜಿಲ್ಲಾಧಿಕಾರಿಗಳ ಸ್ವಾಗತಕ್ಕೆ ಶೃಂಗಾರಗೊಳ್ಳುತ್ತಿರುವ ಬೆಳ್ಳೂರು ಶಾಲೆಗಳು

0
554

ರಿಪ್ಪನ್‌ಪೇಟೆ: ಮೇ 27 ರಂದು ಜಿಲ್ಲಾಧಿಕಾರಿ ನಡೆ ಹಳ್ಳಿಕಡೆಗೆ ಅನ್ವಯ ಈ ಭಾರಿ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದು ಗ್ರಾಮ ವಾಸ್ತವ್ಯಕ್ಕೆ ಆಗಮಿಸುತ್ತಿರುವ ಜಿಲ್ಲಾಧಿಕಾರಿಗಳನ್ನು ಸ್ವಾಗತಿಸಲು ಶಾಲೆಗಳಲ್ಲ ಸುಣ್ಣ-ಬಣ್ಣದೊಂದಿಗೆ ಶೃಂಗಾರಗೊಳ್ಳುತ್ತಿವೆ.

ಮೇ 27 ರಂದು ಶುಕ್ರವಾರ ಬೆಳಗ್ಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ 11 ಗಂಟೆಗೆ ಬೆಳ್ಳೂರು ಗ್ರಾಮ ಪಂಚಾಯ್ತಿನಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಾಮಸ್ಥರುಗಳ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವುದರೊಂದಿಗೆ ಈ ಭಾಗದಲ್ಲಿ ರಾಜ್ಯಕ್ಕೆ ಬೆಳಕು ನೀಡುವ ಯೋಜನೆಗಳಾದ ಶರಾವತಿ, ಮಡೆನೂರು, ಮಾಣಿ, ಚಕ್ರ, ವರಾಹಿ ಹೀಗೆ ಹಲವು ಮುಳಗಡೆ ಪ್ರದೇಶದಿಂದ ನಿರಾಶ್ರಿತರಾಗಿ ಬಂದು ನೆಲೆಸಿರುವ ಸಂತ್ರಸ್ತರ ಸಮಸ್ಯೆಗೆ ಪರಿಹಾರ ಕಲಿಸುವರೆ ಎಂಬ ಆಶಾಭಾವನೆಯಲ್ಲಿ ಈ ಭಾಗದ ಜನರು ಕುತೂಹಲದೊಂದಿಗೆ ಜಿಲ್ಲಾಧಿಕಾರಿಗಳ ಸ್ವಾಗತಕ್ಕೆ ಸಜ್ಜಾಗಿದ್ದಾರೆ.

ಇದರೊಂದಿಗೆ ಶೆಟ್ಟಿಹಳ್ಳಿ ಅಭಯಾರಣ್ಯ ಪ್ರದೇಶವಾಗಿದ್ದು ಸಿರಿಗೆರೆ-ಮೂಗುಡ್ತಿ ವನ್ಯಜೀವಿ ವಲಯ ವ್ಯಾಪ್ತಿಗೆ ಬರುವ ಈ ಗ್ರಾಮಗಳ ಸಂತ್ರಸ್ತರಿಗೆ ಮೊತ್ತೊಂದು ಕಂಟಕ ಎದುರಾಗಿದ್ದು ಒಂದು ಕಡೆ ನಾಡಿಗೆ ಬೆಳಕು ಕೊಡಲು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಕುಟುಂಬಗಳು ಕುಗ್ರಾಮ ಬೆಳ್ಳೂರು ವ್ಯಾಪ್ತಿಯಲ್ಲಿ ಬದುಕಿಗಾಗಿ ಬಗರ್ ಹುಕುಂ ಭೂಮಿ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುವ ಮುನ್ನವೇ ವನ್ಯಜೀವಿ ವಿಭಾಗದ ಈ ಪ್ರದೇಶದಲ್ಲಿ ನೆಲೆಸಿರುವ ಕುಟುಂಬಗಳಿಗೆ ಭೂಮಿ ಹಕ್ಕು ಸೀಗುವುದೇ ಎಂಬ ಕೊರಗು ಕಾಡುವಂತಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಯೋಜನೆಯಿಂದ ಬಡ ರೈತರ ಬವಣೆ ನಿವಾರಣೆಯಾಗುವುದೆ ಎಂಬ ಭರವಸೆಯಲ್ಲಿದ್ದಾರೆ.

ಇದೇ ಸಂದರ್ಭದಲ್ಲಿ ಜಮೀನು ಸವೇಹದ್ದುಬಸ್ತು ಪೋಡಿ, ಸಂಧ್ಯಾ ಸುರಕ್ಷಾ, ವೃದ್ದಾಪ್ಯವೇತನ, ವಿಧವಾ ವೇತನ, ಅಂಗವಿಕಲ ವೇತನ, ಪೌತಿ ಹಕ್ಕು ಬದಲಾವಣೆ, ಪಡಿತರ ಚೀಟಿ, 11 ಇ ನಕ್ಷೆ ತಿದ್ದುಪಡಿ 94 ಸಿ, ಪ್ರಕರಣ ವಿಲೇವಾರಿ ಇನ್ನಿತರ ಮೂಲಭೂತ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿ ಸ್ಥಳದಲ್ಲಿ ಪರಿಹರಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಈ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಹಶೀಲ್ದಾರ್ ಎಸ್.ವಿ.ರಾಜೀವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ನಾಡಕಛೇರಿ ಉಪತಹಶೀಲ್ದಾರ್ ಹುಚ್ಚರಾಯಪ್ಪ, ರೆವಿನ್ಯೂ ಇನ್ಸ್‌ಪೆಕ್ಟರ್, ಗ್ರಾಮ ಲೆಕ್ಕಾಧಿಕಾರಿ ರೇಣುಕಯ್ಯ, ಜಾಕೀರ್‌ಹುಸೇನ್, ಮಂಜುನಾಥ, ಶೋಭಾ ಇನ್ನಿತರ ಸಿಬ್ಬಂದಿ ವರ್ಗ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here