ಜಿಲ್ಲಾಧಿಕಾರಿ ಕಛೇರಿಗೆ ಭೇಟಿ ನೀಡಿದ ವಿಶೇಷ ಅಥಿತಿ !!

0
1134

ಚಿಕ್ಕಮಗಳೂರು: ನಗರದ ಜಿಲ್ಲಾಧಿಕಾರಿ ಕಛೇರಿಗೆ ಮಂಗಳವಾರ ವಿಶೇಷ ವ್ಯಕ್ತಿಯೊಬ್ಬರು ಭೇಟಿ ನೀಡಿದ್ದಾರೆ. ಹೌದು, ಆ ವಿಶೇಷ ವ್ಯಕ್ತಿಯ ಹೆಸರು ಉಡ (Monitor lizard).

ಮಧ್ಯಾಹ್ನ 2.30 ಸುಮಾರಿಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿರುವ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ದಾರಿ ತಪ್ಪಿ ಬಂದಂತಹ ಉಡದ ಮರಿಯೊಂದು ನೇರವಾಗಿ ವಿಪತ್ತು ನಿರ್ವಹಣಾ ಕೇಂದ್ರದ ಒಳಗೆ ಹೋಗಿದ್ದು, ಅದೃಷ್ಟವಶಾತ್ ಕಛೇರಿಯಲ್ಲಿನ ಸಿಬ್ಬಂದಿಗಳು ಊಟಕ್ಕೆ ಹೋಗಿದ್ದರಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ.

ಊಟ ಮಾಡಿ ಬಂದಂತಹ ಕಛೇರಿಯ ಅಧಿಕಾರಿಗಳಾದ ತೇಜಸ್, ನಿರಂಜನ್ ಹಾಗೂ ದೀಕ್ಷಿತ್ ಕಛೇರಿಯಲ್ಲಿರುವ ಉಡವನ್ನು ನೋಡಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಉಡವನ್ನು ಹಿಡಿದುಕೊಂಡು ಹೋಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಉಡವನ್ನು ಹಿಡಿದಿದ್ದರಿಂದ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here