ಜಿಲ್ಲಾ ಪೊಲೀಸರು ಗಾಂಜಾ ಗಿರಾಕಿಗಳನ್ನು ಮುಲಾಜಿಲ್ಲದೆ ಸದೆ ಬಡಿಯಲು ಕ್ರಮಕೈಗೊಂಡಿದ್ದಾರೆ: ಪೊಲೀಸರ ಬೆನ್ತಟ್ಟಿದ ಸಚಿವ ಆರಗ

0
723

ಶಿವಮೊಗ್ಗ:‌ ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಜಿಲ್ಲಾ ಪೊಲೀಸರು ಈ ಗಾಂಜಾ ಗಿರಾಕಿಗಳನ್ನು ಮುಲಾಜಿಲ್ಲದೇ ಸದೆ ಬಡಿಯಲು ಕ್ರಮಕೈಗೊಂಡಿದ್ದಾರೆ. ಭದ್ರಾವತಿಯಲ್ಲಿ ಗಾಂಜಾ ಮಾರಾಟದ ದೊಡ್ಡ ಜಾಲವನ್ನು ಹಿಡಿದಿದ್ದಾರೆ ಇಂತಹ ಪ್ರಕರಣಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದಿಲ್ಲಿ ಹೇಳಿದರು.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗಾಂಜಾ ಸೇವನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ. ಮಾರಾಟಗಾರರನ್ನು ಹಾಗೂ ಬೆಳೆಯುವವರನ್ನು ಬಿಗಿ ಕ್ರಮಗಳ ಮೂಲಕ ಹತ್ತಿಡಬೇಕಾಗಿದೆ. ಆ ಕಾರ್ಯ ನಡೆಯುತ್ತದೆ ಎಂದು ಹೇಳಿದರು.

ಜೈಲೆಂಬ ಸೆರೆಮನೆಯಲ್ಲಿ ಕುಳಿತು ಅದನ್ನೇ ಅರಮನೆಯಾಗಿಸಿಕೊಂಡು ಉದ್ಯಮಿಗಳನ್ನು ಬೆದರಿಸುತ್ತಿರುವ ಎಲ್ಲರ ಆಟಗಳಿಗೆ ಶಾಶ್ವತ ತಿಲಾಂಜಲಿ ಇಡಲಾಗುತ್ತದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತು ಉದ್ಯಮಿಯೊಬ್ಬರಿಗೆ ಬೆದರಿಕೆ ಕರೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಎಲ್ಲಾ ಪ್ರಕರಣಗಳ ಬಗ್ಗೆ ಮುಲಾಜಿಲ್ಲದೇ ಶಿಸ್ತು ಕ್ರಮಕೈಗೊಳ್ಳಲಾಗುತ್ತದೆ. ಯಾವುದೇ ಜೈಲುಗಳಲ್ಲಿ ಸಡಿಲ ರೀತಿ ಇಲ್ಲ. ಆದರೆ ಕೆಲವರು ಈ ಜೈಲುಗಳನ್ನು ಅರಮನೆಯನ್ನಾಗಿ ಮಾಡಿಕೊಂಡು ಅಲ್ಲಿ ಆಟವಾಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಕಿಡಿಗೇಡಿಗಳ ವರ್ತನೆ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ ಗೃಹ ಸಚಿವರು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳ ಬಗ್ಗೆ ಆರೋಪಿಗಳು ನಡೆಸುತ್ತಿರುವ ಹಲ್ಲೆಗಳ ಕ್ರಮಗಳು ಸರಿಯಲ್ಲ. ಅಂತಹವರ ವಿರುದ್ಧ ಬಿಗಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಉಳ್ಳಾಲ ಪೊಲೀಸ್ ಠಾಣೆಯ ಸಿಬ್ಬಂದಿ ವಾರೆಂಟ್ ನೀಡಲು ಹೋದಾಗ ಹಾಗೂ ಮಂಗಳೂರು ಪೊಲೀಸರು ಅಕ್ರಮ ಮರಳು ಸಾಗಾಟ ತಡೆಯಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಪರಿಗಣಿಸಿದ್ದು, ಮುಲಾಜಿಲ್ಲದೇ ಇಂತಹ ಎಲ್ಲಾ ಕ್ರಮಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದರು.

“ಲಸಿಕೆ ವಿಚಾರವಾಗಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರು ಮನುಷ್ಯತ್ವ ಮೀರಿ ಮಾತನಾಡುತ್ತಿರುವುದು ಬೇಸರ ಸಂಗತಿ ಅದನ್ನು ಡಿಸ್ಟಿಲ್ ವಾಟರ್ ಎಂದಿದ್ದಾರೆ. ದೇಶದ ಹಿತದೃಷ್ಠಿಯಿಂದ ಮನುಷ್ಯತ್ವದಿಂದ ಮಾತನಾಡಬೇಕಿತ್ತು.”

– ಆರಗ ಜ್ಞಾನೇಂದ್ರ
ಜಾಹಿರಾತು

LEAVE A REPLY

Please enter your comment!
Please enter your name here