ಜಿಲ್ಲಾ ಮಟ್ಟದ ಕಂದಾಯೋತ್ಸವದಲ್ಲಿ ಹೊಸನಗರ ಕಂದಾಯ ಇಲಾಖೆಗೆ ಸಮಗ್ರ ಪ್ರಶಸ್ತಿ ; ತಹಶೀಲ್ದಾರ್ ವಿ.ಎಸ್. ರಾಜೀವ್‌ರವರಿಂದ ಅಭಿನಂದನೆ

0
713

ಹೊಸನಗರ: ಜೂನ್ 10ನೇ ಶುಕ್ರವಾರ ಮತ್ತು 11ನೇ ಶನಿವಾರ ಭದ್ರಾವತಿಯ ಬಿಎಸ್‌ಎನ್‌ಎಲ್ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕಂದಾಯ ಇಲಾಖೆಯ ನೌಕರರ ಸಾಂಸ್ಕೃತೀಕ ಕಾರ್ಯಕ್ರಮ ಕೀಡಾಕೂಟವನ್ನು ಏರ್ಪಡಿಸಲಾಗಿದ್ದು ಈ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾಕೂಟದಲ್ಲಿ ಹೊಸನಗರ ತಾಲ್ಲೂಕು ಕಂದಾಯ ಇಲಾಖೆಯ ನೌಕರರ ತಂಡ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ ಇವರನ್ನು ತಹಶೀಲ್ದಾರ್ ವಿ.ಎಸ್. ರಾಜೀವ್‌ರವರು ಅಭಿನಂದಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾವ್ಯಶ್ರೀ ಮೇಘನಾ, ಶ್ರೀವಲ್ಲಿ, ಅಂಬಿಕಾ, ರಕ್ಷಿತಾ, ಅನುಷಾ, ಭೂಮಿಕಾ, ದೀಪುರವರು ಭಾಗವಹಿಸಿದ್ದು ಪ್ರಥಮ ಸ್ಥಾನ ಪಡೆದಿದ್ದಾರೆ.

ಮಹಿಳೆಯರ ಚಾವ್ಲಿಂಗ್ ಎಸೆತದಲ್ಲಿ ಶೋಭಾರವರು ಪ್ರಥಮ ಸ್ಥಾನ ಪಡೆದಿದ್ದು ಪುರುಷರ ಬಕೆಟ್ ಇನ್ ದಿ ಬಾಲ್‌ನಲ್ಲಿ ವೆಂಕಟೇಶಮೂರ್ತಿಯವರು ಹಾಗೂ ಮ್ಯೂಸಿಕಲ್ ಚೇರ್‌ನಲ್ಲಿ ಅಪ್ರೋಜ್ ಅಹ್ಮದ್‌ರವರು ಪ್ರಶಸ್ತಿ ಪಡೆದಿದ್ದಾರೆ.

ಪ್ರಶಸ್ತಿ ಪಡೆದು ಇಡಿ ಹೊಸನಗರ ತಾಲ್ಲೂಕಿಗೆ ಹಾಗೂ ಕಂದಾಯ ಇಲಾಖೆಗೆ ಪ್ರಶಸ್ತಿ ತಂದುಕೊಟ್ಟ ಕಂದಾಯ ನೌಕರರನ್ನು ಕಂದಾಯ ಇಲಾಖೆಯ ಸಿಬ್ಬಂದಿಗಳು ವಿವಿಧ ಇಲಾಖೆಯ ನೌಕರರು ಅಭಿನಂದಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here