ರಿಪ್ಪನ್ಪೇಟೆ: ಹೊಸನಗರ ತಾಲ್ಲೂಕ್ ಮಹಿಳಾ ಸಿರಿಗನ್ನಡ ವೇದಿಕೆಯವರು ಬರುವ ಏಪ್ರಿಲ್ 4 ರಂದು ಹುಂಚ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಎಸ್.ಪಿ.ಬಿ. ಗಾನ ಸ್ಫರ್ಧೆಯನ್ನು ಏರ್ಪಡಿಸಲಾಗಿದ್ದು, ಈ ಸ್ಫರ್ಧೆಗೆ ಭಾಗವಹಿಸುವ ಸ್ಪರ್ಧಾಳುಗಳು ಈ ಕೆಳಕಂಡ ದೂರವಾಣಿಗೆ ಸಂಪರ್ಕಿಸುವಂತೆ ಹೊಸನಗರ ತಾಲ್ಲೂಕ್ ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಶಶಿಕಲಾ ಮಲ್ಲಪ್ಪ ಹಾಗೂ ಹುಂಚ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಚಂದ್ರಕಲಾ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಥಮ ಬಹುಮಾನ 7500 ರೂ. ಪಾರಿತೋಷಕ, ದ್ವಿತೀಯ ಬಹುಮಾನ 5000 ಸಾವಿರ ಪಾರಿತೋಷಕ, ತೃತೀಯ ಬಹುಮಾನ 3000 ರೂ. ಪಾರಿತೋಷಕ ನೀಡಲಾಗುವುದು, ಸ್ಪರ್ಧಾಳುಗಳು ಎಸ್.ಪಿ.ಬಿಯವರು ಹಾಡಿರುವ ಚಿತ್ರಗೀತೆಗಳನ್ನು ಹಾಡಬೇಕು. ಹಾಗೂ ಸ್ಪರ್ಧಾಳುಗಳು ಸಮಯಕ್ಕೆ ಸರಿಯಾಗಿ ಹಾಜರಿರಬೇಕು, 35 ಸ್ಪರ್ಧಾಳುಗಳಿಗೆ ಮಾತ್ರ ಅವಕಾಶ,18 ರಿಂದ 45 ವರ್ಷದವರು ಮಾತ್ರ ಭಾಗವಹಿಸಬೇಕು. ಪ್ರವೇಶ ಶುಲ್ಕ 50 ರೂ. ಗಳು, ಯಾವುದೇ ರೀತಿಯ ವಾದ್ಯಗಳನ್ನು ಬಳಸುವಂತಿಲ್ಲ.
ಹೆಸರು ನೋಂದಾಯಿಸಿಕೊಳ್ಳಲು ಮಾರ್ಚ್ 28 ಕೊನೆಯ ದಿನವಾಗಿದೆ. ಭಾಗವಹಿಸುವ ಸ್ಪರ್ಧಾಳುಗಳಿಗೆ ಮಧ್ಯಾಹ್ನದ ಉಪಹಾರದ ವ್ಯವಸ್ಥೆ ಇರುತ್ತದೆ.
ಭಾಗವಹಿಸುವ ಸ್ಪರ್ಧಾಳುಗಳು ಈ ಮೊಬೈಲ್ ನಂಬರ್ ಗಳಿಗೆ 9148757565, 9448627845 ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಲು ಕೋರಿದ್ದಾರೆ.