ಜೀಪಿನ ಟಾಪ್’ನಲ್ಲಿ ಕುಳಿತು ಯುವಕ – ಯುವತಿಯರ ಪ್ರಯಾಣ ; ಪ್ರಕರಣ ದಾಖಲು

0
1038

ಚಿಕ್ಕಮಗಳೂರು: ಜಿಲ್ಲೆಯ ನಿಸರ್ಗ ಸೌಂದರ್ಯ ಸವಿಯಲು ಬರುತ್ತಿರುವ ಕೆಲವು ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗಿದ್ದು, ಅಂತವರಿಗೆ ಬಿಸಿ ಮುಟ್ಟಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಮುಳ್ಳಯ್ಯನಗಿರಿಗೆ ಜೀಪಿನ ಟಾಪ್ ನಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದ ಯುವಕ-ಯುವತಿಯರ ಮೇಲೆ ಕೇಸ್ ದಾಖಲಾಗಿದೆ.

ಯುವಕ-ಯುವತಿಯರು ‌ಅಮಲು ಪದಾರ್ಥ ಸೇವಿಸಿ ಮುಳ್ಳಯ್ಯನಗಿರಿಗೆ ಹೋಗುತ್ತಿದ್ದರು ಎಂದು ಹೇಳಲಾಗಿದೆ. ಕೇರ್ ಲೆಸ್ ಆಗಿ ಹೋಗುತ್ತಿದ್ದವರ ವಿರುದ್ಧ NDPS ಕಾಯಿದೆಯಡಿಯಲ್ಲಿ ಕೇಸ್ ಹಾಕಲಾಗಿದೆ.

ಜಿಲ್ಲೆಯ ಮುಳ್ಳಯ್ಯನಗಿರಿ, ದೇವೀರಮನೆ ಬೆಟ್ಟ, ಕಳಸದ ಸುತ್ತಮುತ್ತಲ ಕೆಲವು ಪ್ರದೇಶಗಳಿಗೆ ತೆರಳುವ ಪ್ರವಾಸಿಗರು ಇಂಥ ಕೃತ್ಯಗಳಲ್ಲಿ ತೊಡಗುತ್ತಿರುವುದು ಸಾಮಾನ್ಯವಾಗಿದೆ.

ಪ್ರವಾಸಿಗರ ಜೊತೆ ವಾಹನ ಸವಾರರ ಮೇಲೂ ಪ್ರಕರಣ ದಾಖಲಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯ ಕೆಎ 34M, 6646 ಬೊಲೆರೋ ವಾಹನವನ್ನು ಸೀಜ್ ಮಾಡಲಾಗಿದ್ದು, ಚಿಕ್ಕಮಗಳೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here