ಜೆಸಿಐ ಡೈಮಂಡ್ ಸಂಸ್ಥೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದೆ ; ಗುರುರಾಜ್‌ ಎರಗಿ

0
426

ಹೊಸನಗರ: ಜೆಸಿಐ ಮೈಮಂಡ್ ಸಂಸ್ಥೆ ಈ ದೇಶದಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದು ಅದರಂತೆ ಹೊಸನಗರ ತಾಲ್ಲೂಕಿನಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಹೊಸನಗರ ಜೆಸಿಐ ಡೈಮಂಡ್‌ನ ಅಧ್ಯಕ್ಷರಾದ ಗುರುರಾಜ್‌ ಎರಗಿರವರು ಹೇಳಿದರು.

ಕಾಳಿಕಪುರದಲ್ಲಿ ನುರಿತ ಆಸ್ಪತ್ರೆಯ ತಜ್ಞರಿಂದ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಇದರ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸನಗರ ಜೆಸಿಐನಿಂದ ಆರೋಗ್ಯ ಶಿಬಿರಾ, ಕಣ್ಣಿನ ಶಿಬಿರಾ ರಕ್ತದಾನ ಶಿಬಿರದ ಜೊತೆಗೆ ಉತ್ತಮವಾದ ಈ ಸಮಾಜಕ್ಕೆ ಬೇಕಾಗುವಂತಹ ಕೊಡುಗೆ ನೀಡುತ್ತಾ ಬರುತ್ತಿದೆ. ಕೊರೊನಾ ಸಂದರ್ಭದಲ್ಲಿ ಬಡವರಿಗೆ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಕಿಟ್‌ಗಳನ್ನು ಹಂಚಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸೇವೆ ಮಾಡಲು ಇಚ್ಚಿಸಿದ್ದು ಸಾರ್ವಜನಿಕರ ಸಹಕಾರ ಹಾಗೂ ಜೆಸಿಐ ಸಂಸ್ಥೆಯ ಸದಸ್ಯರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಈ ಆರೋಗ್ಯ ಶಿಬಿರಾದಲ್ಲಿ ಮನುಷ್ಯನ ದೇಹದ ಎಲ್ಲ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಕಾರ್ಯದರ್ಶಿ ಸಂದೀಪ, ಖಜಾಂಚಿ ಕವೀಶ್, ರಾಘವೇಂದ್ರ ಅರಳಿಸುರಳಿ ಜೆಸಿಐನ ಡೈಮಂಡ್ ಎಲ್ಲ ಸದಸ್ಯರು ಹಾಗು ಸಾರ್ವಜನಿಕರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here