ಶೃಂಗೇರಿ: ಕಾರ್ಕಳದ ಸಾಣೂರು ಬೀಜೋತ್ಪಾದನಾ ಕೇಂದ್ರದ ಬಳಿ ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಅವಿನಾಶ್ ವಿ (29) ಸಾವನ್ನಪ್ಪಿದ್ದಾರೆ.
ತಡರಾತ್ರಿ 12 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಜೆಸಿಬಿ ಮೂಡಬಿದ್ರೆಯಿಂದ ಕಾರ್ಕಳದ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ಚಾಲನೆ ನಡೆಸುತ್ತಿದ್ದ ಅವಿನಾಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಅವಿನಾಶ್ ಶೃಂಗೇರಿ ತಾಲ್ಲೂಕಿನ ಕಲ್ಕಟ್ಟೆ ಗ್ರಾಮದ ನಿವಾಸಿ ವಾಸು ಪೂಜಾರಿ ಅವರ ಪುತ್ರನಾಗಿದ್ದು ಕಾರ್ಕಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅಪಘಾತದಲ್ಲಿ ಮೃತಪಟ್ಟಿರುವ ಅವಿನಾಶ್ ಅವರನ್ನು ನೆನೆದು ಕುಟುಂಬಸ್ಥರು ಹಾಗೂ ಗೆಳೆಯರು ಅತೀವವಾದ ದುಃಖ ವ್ಯಕ್ತಪಡಿಸಿದ್ದಾರೆ.
Related