‘ಜೆ.ಹೆಚ್.ಪಟೇಲರಿಗೆ ಸರಿಸಾಟಿ ಪಟೇಲರೆ’

0
362

ರಿಪ್ಪನ್‌ಪೇಟೆ: ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡುವ ಮೂಲಕ ಪ್ರಾಂತ್ಯವಾರು ಭಾಷೆಗೆ ಹೆಚ್ಚು ಒತ್ತು ನೀಡಿದ ಧೀಮಂತ ವ್ಯಕ್ತಿಯಾಗಿದ್ದರು ಅಲ್ಲದೆ ಹಲವು ಭಾಷೆಗಳು ಬರುತ್ತಿದ್ದರು ಕೂಡಾ ಎಂದೂ ಕನ್ನಡ ನಾಡು ನುಡಿ ವಿಷಯದಲ್ಲಿ ರಾಜಿಯಾದವರಲ್ಲ. ನೇರ ದಿಟ್ಟ ವ್ಯಕ್ತಿತ್ವದ ನಾಯಕರಾಗಿ ಯಾವುದೇ ಇಲಾಖೆಯ ಕುರಿತು ಚರ್ಚಿಸುವ ಬದಲು ನೇರವಾಗಿ ಉತ್ತರಿಸಿ ವಿರೋಧ ಪಕ್ಷದವರ ಮನಸ್ಸು ಗೆಲ್ಲುವಂತಹ ವ್ಯಕ್ತಿತ್ವದ ಹಿರಿಯ ಚೇತನ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಮುಖಂಡ ಜೆ.ಹೆಚ್.ಪಟೇಲರಿಗೆ ಸರಿಸಮನಾದ ವ್ಯಕ್ತಿ ಪಟೇಲರೆ ಎಂದು ಜನಪರ ಹೋರಾಟ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ ಮತ್ತು ಜೆಡಿಎಸ್ ರಾಜ್ಯ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ವರ್ಣಿಸಿದರು.

ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲರ 91ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಿಧಾನಸಭೆಯಲ್ಲಿ ಅವರ ಭಾಷಣದ ಮಾತುಗಳನ್ನು ಕೇಳಲು ಸರತಿ ಸಾಲಿನಲ್ಲಿ ಜನ ಸೇರುತ್ತಿದ್ದರು ಎಂದು ಯಾರಿಗೂ ನೋವು ಉಂಟಾಗದಂತೆ ಹಾಸ್ಯದ ಮೂಲಕ ಮಾತಿನ ಚಾತುರ್ಯತೆಯಲ್ಲಿ ಉತ್ತರಿಸಿ ಮಂತ್ರಮುಗ್ದರನ್ನಾಗಿಸುವ ಕಲೆ ಪಟೇಲರಲ್ಲಿತ್ತು ಎಂದು ಬಣ್ಣಿಸಿದರು.

ಜೆಡಿಎಸ್ ರೈತಮೋರ್ಚ ಮುಖಂಡ ಮುಡುಬ ಧರ್ಮಪ್ಪ, ಜಿ.ಎಸ್.ರಾಘವೇಂದ್ರ, ಕೆ.ಆರ್.ಭೀಮರಾಜ್‌ಗೌಡರು ಕೊಳವಳ್ಳಿ, ಆರ್.ರಾಘವೇಂದ್ರ, ಹೋಬಳಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಆಸೀಫ್, ಜಿ.ಡಿ.ಮಲ್ಲಿಕಾರ್ಜುನ, ಜೆ.ಎಂ.ಶಾಂತಕುಮಾರ್ ಜಂಬಳ್ಳಿ, ರೈತ ಸಂಘದ ಮುಖಂಡ ಕಲ್ಮಕ್ಕಿ ಸುಗಂಧರಾಜ್, ರವೀಂದ್ರ ಕೆರೆಹಳ್ಳಿ, ನಾಗರಾಜ್‌ಗೌಡರು ಮಳವಳ್ಳಿ, ಕಮಲಾಕ್ಷಪ್ಪ ಕಲ್ಲುಕೊಪ್ಪ, ಧರ್ಮರಾಜ್‌ಗೌಡ ಸಮಟಗಾರು, ಪ್ರಕಾಶ್ ಪಾಲೇಕರ್, ಕೊಲ್ಲಪ್ಪ ಗವಟೂರು ಇನ್ನಿತರ ಮುಖಂಡರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಜೆ.ಹೆಚ್.ಪಟೇಲರ ಭಾವಚಿತ್ರವನ್ನು ಇಟ್ಟು ಹೂವಿನ ಹಾರಹಾಕಿ ನಮನ ಸಲ್ಲಿಸಿ ಇವರು ಇನ್ನೊಬ್ಬರಿಗೆ ಮಾದರಿಯಾಗಲೆಂದು ಆಶಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here