20.6 C
Shimoga
Friday, December 9, 2022

ಜೈಲಿನಲ್ಲೇ ಬಡಿದಾಡಿಕೊಂಡ ವಿಚಾರಣಾಧೀನ ಕೈದಿಗಳು !

ಶಿವಮೊಗ್ಗ: ಹಳೇ ದ್ವೇಷಕ್ಕೆ ಜೈಲಿನಲ್ಲೇ ಜಿದ್ದಾಜಿದ್ದಿಗೆ ಬಿದ್ದ ಇಬ್ಬರು ವಿಚಾರಣಾಧೀನ ಕೈದಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಶಿವಮೊಗ್ಗ ಜೈಲಿನಲ್ಲಿ ನಡೆದಿದೆ.

ಶಹೀದ್​​​ ಖುರೇಷಿ ಮತ್ತು ಫೈಝುಲ್ಲಾ ರೆಹಮಾನ್​ ನಡುವೆ ಈ ಘರ್ಷಣೆ ನಡೆದಿದ್ದು, ಕಾರಾಗೃಹ ಅಧೀಕ್ಷಕಿ ಡಾ.ಅನಿತಾ ಅವರಿಂದ ದೂರು ದಾಖಲಾಗಿದೆ. ಶಹೀದ್​ ಖುರೇಷಿ ವಿರುದ್ಧ ಕ್ರಮಕೈಗೊಳ್ಳುವಂತೆ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಖೈದಿಗಳಾದ ಶಹೀದ್ ಖುರೇಷಿ ಮತ್ತು ಫೈಝುಲ್ಲಾ ರೆಹಮಾನ್ ನಡುವೆ ಹಳೆಯ ದ್ವೇಷದ ಇತ್ತು. ಅದರಂತೆ ಖುರೇಷಿಯು ರೆಹಮಾನ್ಗೆ ಜೈಲಿನಲ್ಲಿ ಹಲ್ಲೆ ನಡೆಸಿದ್ದು, ಈ ವೇಳೆ ಪರಸ್ಪರ ಹೊಡೆದಾಟ ನಡೆದಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜೈಲು ಅಧೀಕ್ಷಕಿ ಖುರೇಷಿ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!