ಜ್ಞಾನ ಮಾರ್ಗದಿಂದ ಜನರಲ್ಲಿ ಭಕ್ತಿ ತುಂಬಿದ ಮಹಾಪುರುಷ ಕೈವಾರ ತಾತಯ್ಯ: ಗ್ರೇಡ್2 ತಹಶೀಲ್ದಾರ್ ರಾಕೇಶ್ ಫಾನ್ಸಿಸ್ಸ್ ಬ್ರಿಟ್ಟೋ

0
387

ಹೊಸನಗರ: ಜ್ಞಾನ ಮಾರ್ಗದಿಂದ ಜನರಲ್ಲಿ ಭಕ್ತಿ ತುಂಬಿದ ಮಹಾಪುರುಷ ಕೈವಾರ ತಾತಯ್ಯ ಎಂದು ಹೊಸನಗರದ ಗ್ರೇಡ್2 ತಹಶೀಲ್ದಾರ್ ರಾಕೇಶ್‌ಫಾನ್ಸಿಸ್ಸ್ ಬ್ರಿಟ್ಟೋರವರು ಹೇಳಿದರು.

ಇಲ್ಲಿನ ತಾಲ್ಲೂಕು ಕಛೇರಿಯ ಆವರಣದಲ್ಲಿ ಸರ್ಕಾರದ ಸುತ್ತೋಲೆಯ ಅನ್ವಯ ತಾಲ್ಲೂಕು ಆಡಳಿತ ಮತ್ತು ಬಲಿಜ ಸಮಾಜದ ಸಂಯುಕ್ತ ಆಶ್ರಯದಲ್ಲಿ ಕೈವಾರ ತಾತಯ್ಯ ಯೋಗಿನಾರೇಯಣ ಯತಿಂದ್ರ ಜಯಂತಿಯನ್ನು ಏರ್ಪಡಿಸಲಾಗಿದ್ದು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಇವರ ಸಾಕು ತಂದೆ ತಾಯಿಗಳು ಹೇಳುತಿದ್ದ ಪುರಾಣಗಳು ಪುಣ್ಯ ಪುರುಷರ ಕಥೆಗಳಿಂದ ಸ್ಫೂರ್ತಿ ಪಡೆದ ನಾರೇಯಣನವರಿಗೆ ವಿಷಯೋಪ ಭೋಗಗಳೆಂದರೆ ವಿರಕ್ತಭಾವವೇ ಊರಿನ ಕೂಲಿಮಠದಲ್ಲಿ ಸಂಸ್ಕೃತ, ಕನ್ನಡ, ತೆಲಗು ಭಾಷೆಗಳನ್ನು ಕಲಿತು ಪಾರಂಗತನಾಗಿ ದೇವರ ಜ್ಞಾನದಲ್ಲಿ ಸದಾ ಮಗ್ನರಾಗಿರುತ್ತಿದ್ದರು ಇವರು ಹೆಂಗಸರು ತಮ್ಮ ಸ್ವಂತ ಅಕ್ಕ-ತಂಗಿ-ತಾಯಿಯವರಂತೆ ಕಾಣುತ್ತಿದ್ದರು ಲೋಕದ ಸ್ತ್ರೀಯರೆಲ್ಲ ನಮ್ಮ ಸ್ವಂತ ತಾಯಿಯಂತೆ ಕಾಣುವುದರ ಜೊತೆಗೆ ಇವರು ಬಳೆ ವ್ಯಾಪಾರ ಮಾಡುತ್ತಿದ್ದು ಬಳೆ ಇಟ್ಟುಕೊಂಡು ಕಾಸು ಇಲ್ಲವೆಂದರೆ ಎಲ್ಲವೂ ದೇವರ ಇಚ್ಛೆ ಎನ್ನುತ್ತಿದ್ದರು.‌ ಇಂಥಹ ಮಹಾಪುರುಷರನ್ನು ನೆನಪಿಸಿಕೊಳ್ಳುವುದು ನಮ್ಮ ನಿಮ್ಮೇಲ್ಲರ ಭಾಗ್ಯ ಎಂದರು.

ಈ ಜಯಂತಿಯಲ್ಲಿ ತಾಲ್ಲೂಕು ಕಛೇರಿಯ ಸಿಬ್ಬಂದಿಗಳಾದ ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಎಂ ಆರಾಧ್ಯ, ಚಿರಾಗ್, ನಾಗರಾಜ್ ಕಿಣಿ, ಬಲಿಗ ಸಂಘದ ಅಧ್ಯಕ್ಷ ಮಂಜುನಾಥ್, ಶೇಖರಪ್ಪ, ಜಯರಾಜ್, ಅಶೋಕ್, ನಂಜುಂಡ, ಮೋಹನ್‌ದಾಸ್, ನಾಗರಾಜ್ ಗಿರೀಶ್, ಶ್ರೀಧರ, ಸತೀಶ್, ರಮೇಶ್, ನಾರಾಯಣ, ಶೇಷಪ್ಪ, ದೇವೆಂದ್ರಪ್ಪ, ಮಂಜುನಾಥ್, ರವಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here