23.2 C
Shimoga
Sunday, November 27, 2022

ಟಿಇಟಿ ಪರೀಕ್ಷೆಗೆ ಹಾಜರಾದ ಮಹಿಳಾ ಅಭ್ಯರ್ಥಿಯ ಹಾಲ್ ಟಿಕೆಟ್‌ನಲ್ಲಿ ಸನ್ನಿ ಲಿಯೋನ್ ಅಶ್ಲೀಲ ಫೋಟೋ ! ದಂಗಾದ ಅಭ್ಯರ್ಥಿ

ಶಿವಮೊಗ್ಗ : ಭಾನುವಾರ ನಡೆದ ಟಿಇಟಿ ಪರೀಕ್ಷೆಗೆ ಹಾಜರಾದ ಮಹಿಳಾ ಅಭ್ಯರ್ಥಿಯ ಹಾಲ್ ಟಿಕೆಟ್‌ನಲ್ಲಿ ಅಭ್ಯರ್ಥಿಯ ಫೋಟೋ ಬದಲು ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಫೋಟೋ ಕಾಣಿಸಿಕೊಂಡಿದೆ. ಇದನ್ನು ಕಂಡು ಅಭ್ಯರ್ಥಿ ದಂಗಾಗಿರುವ ಘಟನೆ ನಡೆದಿದೆ.


ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿ ದೂರು ದಾಖಲಿಸಲಾಗಿದೆ.
ಭಾನುವಾರ ಶಿವಮೊಗ್ಗದಲ್ಲಿ ನಡೆದ ಟಿಇಟಿ ಪರೀಕ್ಷೆ ವೇಳೆ ಹಾಜರಾದ ಮಹಿಳಾ ಅಭ್ಯರ್ಥಿಯ ಹಾಲ್ ಟಿಕೆಟ್‌ನಲ್ಲಿ ಅಶ್ಲೀಲ ಫೋಟೋ ಕಾಣಿಸಿಕೊಂಡಿದೆ, ಇದನ್ನು ಗಮನಿಸಿದ ಎನ್‌ಇಎಸ್‌ನ ರುದ್ರಪ್ಪ ಕಾಲೇಜು ಪ್ರಾಂಶುಪಾಲ ಚನ್ನಪ್ಪ ಅವರು ಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ.
ಈ ಪ್ರಕರಣವನ್ನು ಸಿಇಎನ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪದ ಪರೀಕ್ಷಾರ್ಥಿಯೊಬ್ಬರು ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ರುದ್ರಪ್ಪ ಕಾಲೇಜಿನಲ್ಲಿ ಟಿಇಟಿ ಪರೀಕ್ಷೆ ಬರೆಯಲು ಬಂದಿದ್ದರು. ಡಿಎಡ್, ಬಿಎಡ್ ಆದವರಿಗೆ ನಿಗದಿಪಡಿಸಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ಬಂದಿದ್ದ ವೇಳೆ ಯುವತಿಯ ಹಾಲ್ ಟಿಕೆಟ್ನಲ್ಲಿ ಸನ್ನಿ ಲಿಯೋನ್ ಅಶ್ಲೀಲ ಫೋಟೋ ಇರುವುದು ಕಂಡು ಬಂದಿದೆ.

ಇನ್ನು ಈ ರೀತಿ ಮೂಡಿ ಬಂದಿದ್ದಕ್ಕೆ ವಿದ್ಯಾರ್ಥಿನಿ ಪರೀಕ್ಷೆ ಬರೆಯುವ ಅರ್ಧ ಗಂಟೆಯ ಮುಂಚೆ ಕಾಲೇಜಿನ ಪ್ರಾಂಶುಪಾಲರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರಾಂಶುಪಾಲರು ಸಾರ್ವಜನಿಕ ಶಿಕ್ಷಣ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಈ ಮಾಹಿತಿಯನ್ನ ಶಿಕ್ಷಣ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇದನ್ನು ಆನ್‌ಲೈನ್ ದೋಷ ಎಂದು ಪರಿಗಣಿಸಿ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

“ಟಿಇಟಿ ಹಾಲ್ ಟಿಕೆಟ್‌ನಲ್ಲಿ ಅಭ್ಯರ್ಥಿ ಬದಲು ಅಶ್ಲೀಲ ಫೋಟೊ ಅಪ್ಲೋಡ್ ಆಗಿದೆ, ಈ ಕುರಿತು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ, ದೂರು ಆಧರಿಸಿ ಈಗಾಗಲೇ ತನಿಖೆ ಆರಂಭಿಸಿದ್ದೇವೆ. ಘಟನೆಗೆ ಸಂಬಂಧಿಸಿ ಅಭ್ಯರ್ಥಿ ಬಳಿ ಮಾಹಿತಿ ಪಡೆಯಲಾಗಿದೆ. ಅರ್ಜಿ ಸಲ್ಲಿಕೆಗಾಗಿ ಬೇರೆಯವರಿಗೆ ಹೇಳಲಾಗಿತ್ತು ಎಂದು ಅಭ್ಯರ್ಥಿ ತಿಳಿಸಿದ್ದಾರೆ. ಅಭ್ಯರ್ಥಿಯ ಹೇಳಿಕೆ ಆಧರಿಸಿ ಮೂವರನ್ನು ವಿಚಾರಣೆಗೆ ಕರೆಯಲಾಗಿದೆ.”
-ಮಿಥುನ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿ

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!