ಚಾಲಕನಿಗೆ ಫಿಟ್ಸ್ ಬಂದು ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ ; ಸಿಗಂದೂರಿಗೆ ತೆರಳುತ್ತಿದ್ದ 10 ಮಂದಿಗೆ ಗಾಯ

0
930

ಸಾಗರ: ಸಿಗಂದೂರು ದೇವಸ್ಥಾನಕ್ಕೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವೆಲ್ಸ್ ಚಾಲಕನಿಗೆ ಫಿಟ್ಸ್ ಬಂದು, ನಿಯಂತ್ರಣ ತಪ್ಪಿದ ಪರಿಣಾಮ 10 ಮಂದಿಗೆ ಗಾಯಗೊಂಡಿರೋ ಘಟನೆ ನಡೆದಿದೆ.

ರಾಮನಗರದ ಬಿಡದಿಯ ಪ್ರವಾಸಿಗರನ್ನು ಸಿಗಂದೂರು ದೇವಿಯ ದರ್ಶನಕ್ಕೆ ಕರೆದೊಯ್ಯುತ್ತಿದ್ದಂತ ಸಂದರ್ಭದಲ್ಲಿ, ಟಿಟಿ ಚಾಲಕನಿಗೆ ಫಿಟ್ಸ್ ಬಂದಿದೆ. ಇಳಿಜಾರು ರಸ್ತೆಯಲ್ಲಿಯೇ ಹೀಗೆ ಚಾಲಕನಿಗೆ ಫಿಟ್ಸ್ ಬಂದ ಕಾರಣ, ನಿಯಂತ್ರಣ ತಪ್ಪಿ ಟೆಂಪೋ ಟ್ರಾವೆಲ್ಸ್ ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದಿದೆ. ಟಿಟಿ ಉರುಳಿ ಬಿದ್ದ ಪರಿಣಾಮ, ನಾಲ್ವರಿಗೆ ತೀವ್ರವಾಗಿ ಗಾಯಗೊಂಡಿದ್ದರೇ, ಇತರೆ ಎಂಟು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ತೀವ್ರವಾಗಿ ಗಾಯಗೊಂಡವರನ್ನು ಸಾಗರ ತಾಲೂಕು ಆಸ್ಪತ್ರೆಗೆ, ಸಣ್ಣಪುಟ್ಟ ಗಾಯಾಳುಗಳನ್ನು ಸ್ಥಳೀಯರು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.

ಈ ಘಟನೆ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here