ಟೀಕೆಗೂ ಇತಿ-ಮೀತಿ ಇರಬೇಕು | ಹುಬ್ಬಳ್ಳಿ ಘಟನೆ ನಡೆದ ಎರಡು ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ; ಆರಗ ಜ್ಞಾನೇಂದ್ರ

0
354

ರಿಪ್ಪನ್‌ಪೇಟೆ: ರಾಜಕಾರಣದಲ್ಲಿ ಎದುರಾಳಿಗಳ ಬಗ್ಗೆ ತೇಜೋವಧೆ ಮಾಡಬೇಕು ಟೀಕೆ ಮಾಡಲು ಇತಿ ಮೀತಿ ಇರಬೇಕು ಎದುರಾಳಿ ಕೂಡಾ ಹೌದು ಹೌದು ಎನ್ನಬೇಕು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ರವರಿಗೆ ಆರ್.ಎಂ.ಮಂಜುನಾಥ ಗೌಡರಿಂದಾಗಿ ಮುಂದಿನ ಭಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೇಟ್ ಸೀಗುತ್ತದೋ? ಎಂಬ ಜಿಜ್ಞಾಸೆಯಿಂದ ಈ ರೀತಿಯಲ್ಲಿ ಹತಾಶೆಯ ಹೇಳಿಕೆ ನೀಡುತ್ತಿದ್ದಾರೆಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅರೋಪಿಸಿದರು.

ರಿಪ್ಪನ್‌ಪೇಟೆಯಲ್ಲಿ ಇಂದು ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಕೇವಲ ಐದು ವರ್ಷದ ಅವಧಿಯಲ್ಲಿ 1000 ಸಾವಿರ ಕೋಟಿಗೂ ಅಧಿಕ ಅನುದಾನವನ್ನು ತರಲಾಗಿದೆ.ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಭ್ರಷ್ಟಾಚಾರವಾಗಿದೆ ಎಂಬುದರ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ನಾನೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಮ್ಮ ಪೊಲೀಸ್ ಇಲಾಖೆಯಿಂದ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣದಿಂದ ಸಿಐಡಿ ತನಿಖೆಗೆ ವಹಿಸಿರುವುದಾಗಿ ಹೇಳಿದರು.

ನಾನು ಅನಿರೀಕ್ಷಿತವಾಗಿ ಮಾರ್ಗದಲ್ಲಿ ಸಂಚರಿಸುವ ಸಂದರ್ಭದಲ್ಲಿ ನನಗೆ ಟೀ ಕುಡಿಯಲು ಮನೆಗೆ ಬರಬೇಕು ಎಂದು ಒತ್ತಾಯಿಸಿದ ಕಾರಣ ಹೋಗಬೇಕಾಯಿತು ನಮಗೆ ಪಕ್ಷದ ಕಾರ್ಯಕರ್ತರಾರು ಬೇರೆಯವರು ಯಾರು ಎಂದು ಗೊತ್ತಾಗುವುದಿಲ್ಲ ಕಾರಣ ಎಲ್ಲರೂ ಬಂದು ಸಲ್ಫಿಗಾಗಿ ತಗೆಸಿಕೊಳ್ಳುತ್ತಾರೆ ಆದರೆ ಭ್ರಷ್ಟಾಚಾರಿಗಳು ಯಾರು ಒಳ್ಳೆಯವರು ಯಾರು ಎಂದು ಗೊತ್ತಾಗುತ್ತದೋ ಕಾಂಗ್ರೆಸ್‌ನವರು ಗೃಹ ಸಚಿವರನ್ನು ಡಮ್ಮಿಯಾಗಿ ಮಾಡಿಕೊಂಡಿದ್ದರೂ ಆದರೆ ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರನ್ನು ನಮ್ಮ ಸರ್ಕಾರದಲ್ಲಿ ಅಂತಹವುದೂ ಯಾವುದು ಇಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲವೇ ಹೇಳಿ ಎಂದರು.

ಈ ಹಿಂದೆ ರಾಜ್ಯದ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಪ್ರಶ್ನೆ ಪತ್ರಿಕೆ ಹಗರಣ ನಡೆಯಲಿಲ್ಲವೇ ಎಷ್ಟು ಭಾರಿ ಪರೀಕ್ಷೆ ಮುಂದೂಡಲಾಯಿತು ನಿಮಗೆ ಗೊತ್ತಿಲ್ಲವೇ ರೀತಿಯಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಾವಧಿಯಲ್ಲಿ ನಟ ಡಾ.ರಾಜಕುಮಾರ ಸಾವಿನ ಸಂದರ್ಭದಲ್ಲಿ 6 ಜನ ಸಾವು ಕಂಡರು ಅದೇ ಪುನೀತ್‌ರಾಜ್ ಸಾವನ್ನಪ್ಪಿದ ಸಂದರ್ಭದಲ್ಲಿ 25 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಜಮಾಯಿಸಿದರೂ ಯಾವುದೇ ಗಲಾಟೆ ನಡೆಯದಂತೆ ನಿರ್ವಹಿಸಲಿಲ್ಲವೇ ಅದರೂ ನಾನು ಮತ್ತು ನಮ್ಮ ಸರ್ಕಾರ ಸಮರ್ಥವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಜಾರಿಗೊಳಿಸಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದರೂ ಕೂಡಾ ನನ್ನ ಮೇಲೆ ಅನಾವಶ್ಯಕವಾಗಿ ಡಿಮೂಷನ್ ಮಾಡಬೇಕು ಎಂಬುವುದೆ ಕಾಂಗ್ರೇಸ್ ಗುರಿಯಾಗಿದೆ ಎಂದರು.

ದಿಂಗಾಲೇಶ್ವರ ಶ್ರೀಗಳು ಹೇಳಿಕೆ ಬಗ್ಗೆ ಪ್ರತಿಕ್ರಿಯೆಸಿದ ಅವರು ಸರ್ಕಾರದ ಪಾಲಸಿಯೇ ಜಿಎಸ್‌ಟಿ ಇಎಸ್‌ಟಿ ಹಣ ಕಡಿತವಾವಾಗುವುದು ನಿಯಮ ಅದನ್ನು ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲಾಗುವ ಅನುದಾನದ ಹಣಕ್ಕೆ ಜಿಎಸ್‌ಟಿ ಹಾಕದಂತೆ ಕಾನೂನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಎನ್.ಸತೀಶ್, ಆರ್.ಎಲ್.ನಿರೂಫ್, ಸುಧೀಂದ್ರ ಪೂಜಾರಿ, ನಿಂಗಪ್ಪ ಅರಸಾಳು, ಟಿ.ಆರ್.ಕೃಷ್ಣಪ್ಪ, ವಾಸುಶೆಟ್ಟಿ, ಪುಟ್ಟರಾಜ್ ಹಾಲುಗುಡ್ಡೆ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here