ಟೆಂಟ್’ನಲ್ಲಿ ಧ್ವಜ ಹಾರಿಸಿ ಮಾದರಿಯಾದ ಕುರಿಗಾಹಿ !

0
292

ಕಡೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ದೇಶದ ಮನೆಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕು ಎಂದು ಸರ್ಕಾರ ಕರೆ ನೀಡಿದೆ. ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಮೂರು ದಿನ ಎಲ್ಲೆಡೆ ರಾಷ್ಟ್ರಧ್ವಜ ಹಾರಿಸಲಾಗುತ್ತಿದೆ.

ಇದೇ ವೇಳೆ ಚಿಕ್ಕಮಗಳೂರಿನ ಕುರಿಗಾಯಿಯ ಟೆಂಟ್ ನಲ್ಲೂ ತ್ರಿವರ್ಣ ಬಾವುಟ ಹಾರಿದ್ದು ಗಮನ ಸೆಳೆಯಿತು.

ತಾಲೂಕಿನ ಪಂಚನಹಳ್ಳಿಯ ತೋಟವೊಂದರಲ್ಲಿ ಹಾಕಿದ್ದ ಟೆಂಟ್ ನಲ್ಲಿ ಕುರಿಗಾಯಿ ಧ್ವಜ ಹಾರಿಸಿ ಮಾದರಿಯಾಗಿದ್ದಾನೆ.

ಊರೂರು ಅಲೆಯುತ್ತಾ ಕುರಿಕಾಯುವ ಈತ ಚಿತ್ರದುರ್ಗ ಮೂಲದವನು. ಸದ್ಯ ಕಡೂರಿನ ಪಂಚನಹಳ್ಳಿಯಲ್ಲಿ ಟೆಂಟ್ ಹಾಕಿರುವ ಆತ ಅಲ್ಲೇ ಹರ್ ಘರ್ ತಿರಂಗಾ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾನೆ.

ಜಾಹಿರಾತು

LEAVE A REPLY

Please enter your comment!
Please enter your name here