ಟೆಂಡರ್ ಪ್ರಕ್ರಿಯೆ ಗುಪ್ತ್-ಗುಪ್ತ್ ; ಪ.ಪಂ. ಸದಸ್ಯ ಅಶ್ವಿನಿ ಕುಮಾರ್ ಗಂಭೀರ ಆರೋಪ

0
328

ಹೊಸನಗರ: ವಿವಿಧ ಟೆಂಡರ್‌ಗಳ ದರಪಟ್ಟಿ ಅನುಮೋದನೆ ಕುರಿತಂತೆ ಇಲ್ಲಿನ ಪ.ಪಂ. ಅಧ್ಯಕ್ಷೆ ಗುಲಾಬಿ ಮರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಶುಕ್ರವಾರ ನಡೆಯಿತು.

ಪ.ಪಂ. ವ್ಯಾಪ್ತಿಯ 2021-22ನೇ ಸಾಲಿನ ಎಸ್‌ಎಫ್‌ಸಿ ಶೇ24.10 ಯೋಜನೆ ಅಡಿಯಲ್ಲಿ ಕಛೇರಿಯ ಪೌರ ಕಾರ್ಮಿಕರಿಗೆ ಸಮವಸ್ತç, ಸುರಕ್ಷಾ ಪರಿಕರ ಹಾಗೂ ಎಸ್‌ಟಿ ಪಂಗಡದ ಫಲಾನುಭವಿಗಳ ಮನೆಗಳಿಗೆ ಸೌರಶಕ್ತಿ ದೀಪಗಳನ್ನು ಅಳವಡಿಸುವುದು, ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡಲು ಹೆಚ್ಚುವರಿ ಹಣವನ್ನು ಸಾಮಾನ್ಯ ನಿಧಿಯಿಂದ ಭರಿಸುವ ವಿಷಯ ಕುರಿತಂತೆ ಸಭೆಯಲ್ಲಿ ಅಧಿಕಾರಿಗಳು ವಿಷಯ ಪ್ರಸ್ಥಾಪಿಸಿದರು.

ಈ ವೇಳೆ ಸದಸ್ಯ ಅಶ್ವಿನಿ ಕುಮಾರ್ ಮಾತನಾಡಿ, ಟೆಂಡರ್ ಪ್ರಕ್ರಿಯೆಯನ್ನು ಸದಸ್ಯರ ಗಮನಕ್ಕೆ ತರುವ ಯಾವುದೇ ಪ್ರಯತ್ನ ಪ.ಪಂ.ಕಛೇರಿ ನಡೆಸಿಲ್ಲ. ಕನಿಷ್ಟ ಪತ್ರಿಕಾ ಜಾಹಿರಾತು, ಕಛೇರಿ ಸೂಚನ ಫಲಕಕ್ಕೂ ಟೆಂಡರ್ ಕುರಿತಂತೆ ಮಾಹಿತಿ ಹಾಕಿಲ್ಲ. ಇದು ಸದಸ್ಯರನ್ನು ದಾರಿ ತಪ್ಪಿಸುವ ಕ್ರಮ ಆಗಿದೆ. ಪಂಚಾಯತಿಯ ಈ ನಡೆ ತರವಲ್ಲ. ಇದನ್ನು ತಾವು ಸಹಿಸುವುದಿಲ್ಲ ಎಂಬ ಗಂಭೀರ ಆರೋಪ ಮಾಡಿದರು.

ಇನ್ನು ಮುಂದೆ ಈ ರೀತಿಯ ತಪ್ಪುಗಳು ನಡೆಯದಂತೆ ಜಾಗೃತಿ ವಹಿಸುವ ಭರವಸೆಯನ್ನು ಮುಖ್ಯಾಧಿಕಾರಿ ಟಿ. ಬಾಲಚಂದ್ರಪ್ಪ ನೀಡಿದ ಬಳಿಕ ಸಭೆ ಸರಾಗವಾಗಿ ಮುಂದುವರೆಯಿತು.

15ನೇ ಹಣಕಾಸು ಮೂಲ ಅನುದಾನ, 14ನೇ ಹಣಕಾಸು ಆಯೋಗ, ಎಸ್‌ಎಫ್‌ಸಿ ವಿಶೇಷ ನಿಧಿ ಉಳಿಕೆ ಮೊತ್ತ, ಮುನಿಸಿಪಲ್ ಫಂಡ್ ಅನುದಾನದಡಿಯಲ್ಲಿ ಕರೆಯಲಾದ ಟೆಂಡರ್ ಗಳ ದರಪಟ್ಟಿ ಅನುಮೋದನೆ ಸೇರಿದಂತೆ ವಾರ್ಡ್-3ರ ಕ್ರಿಶ್ಚಿಯನ್ ಕಾಲೋನಿಯ ಬೋರ್‌ವೆಲ್ ಮೋಟರ್ ದುರಸ್ಥಿ ಕುರಿತಂತೆ ಸಭೆ ಅನುಮೋದನೆ ನೀಡಿತು ಹಾಗೂ ಶೀಘ್ರವೇ ಟೆಂಡರ್ ಕಾಮಗಾರಿಗಳ ಅನುಷ್ಠಾನಕ್ಕೆ ಚಾಲನೆ ನೀಡುವಂತೆ ಸಭೆ ಸೂಚಿಸಿತು

ಸಭೆಯಲ್ಲಿ ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯರಾದ ಸುರೇಂದ್ರ ಕೊಟ್ಯಾನ್, ಗುರುರಾಜ್, ಗಾಯತ್ರಿ, ಸಿಂಥಿಯಾ, ನಾಗ, ನಾಮ ನಿರ್ದೇಶಿತ ಸದಸ್ಯರಾದ ಎಂ.ಎನ್. ಸುಧಾಕರ್, ಶ್ರೀಪತಿರಾವ್ ಸ್ಭೆರಿದಂತೆ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here