ಟೈಲರ್ ಕತ್ತು ಸೀಳಿ ಘೋರ ಕಗ್ಗೊಲೆ ಮಾಡಿದಂತಹ ಮುಸ್ಲಿಂ ಗೂಂಡಾಗಳನ್ನು ನೇಣುಗಂಬಕ್ಕೇರಿಸುವ ಅಥವಾ ಗುಂಡು ಹೊಡೆದು ಸಾಯಿಸುವ ಕಠಿಣ ಕಾನೂನು ತರುವಂತೆ ಈಶ್ವರಪ್ಪ ಒತ್ತಾಯ

0
256

ಶಿವಮೊಗ್ಗ: ಸಂವಿಧಾನ ತಿದ್ದುಪಡಿ ಮಾಡಿ ಕೋಮು ಗಲಭೆಯನ್ನು ಸೃಷ್ಠಿಸಲು ಕಾರಣವಾಗುತ್ತಿರುವ ಬಹಿರಂಗವಾಗಿ ಪ್ರಧಾನಿ ಮೋದಿ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಹಾಗೂ ಸಾಮಾನ್ಯ ಹಿಂದೂ ಟೈಲರ್ ಕತ್ತು ಸೀಳಿ ಘೋರ ಕಗ್ಗೊಲೆ ಮಾಡಿದಂತಹ ಮುಸ್ಲಿಂ ಗೂಂಡಾಗಳನ್ನು ನೇಣುಗಂಭಕ್ಕೇರಿಸುವ ಅಥವಾ ಗುಂಡು ಹೊಡೆದು ಸಾಯಿಸುವ ಕಠಿಣ ಕಾನೂನು ತರುವಂತೆ ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸುವುದಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಅವರು ಇಂದು ಶಿವಪ್ಪನಾಯಕ ವೃತ್ತದಲ್ಲಿ ರಾಜಸ್ಥಾನದ ಉದಯಪುರದಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿ ಪೋಸ್ಟ್ ಮಾಡಿದ್ದ ಕಾರಣಕ್ಕೆ ಕನ್ನಯ್ಯಾ ಲಾಲ್ ಎಂಬ ಟೈಲರ್ ನನ್ನು ಘೋರವಾಗಿ ಹತ್ಯೆಗೈದು ವಿಡಿಯೋ ವೈರಲ್ ಮಾಡಿ ತತಮ್ಮ ಕೃತ್ಯ ಸಮರ್ಥಿಸಿಕೊಂಡಿದ್ದಲ್ಲದೇ ಪ್ರಧಾನಿ ಮೋದಿ ಅವರಿಗೂ ಇದೇ ಗತಿ ಬರಲಿದೆ ಎಂದು ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ನಗರಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೊಲೆಗಡುಕರೇ ತಾವು ಕೊಲೆ ಮಾಡಿದ್ದು ಎಂದು ನೇರವಾಗಿ ಹೇಳಿದ ಮೇಲೆ ಕಾನೂನಿನ ಪ್ರಕಾರ ಅವರಿಗೆ ನ್ಯಾಯಾಲಯದಲ್ಲಿ ಕರೆದುಕೊಂಡು ಹೋದ ಮೇಲೂ ಕೂಡ ಅವರು ಇದೇ ಹೇಳಿಕೆ ನೀಡಿದಾಗ ಅವರನ್ನು ಅಲ್ಲೇ ಸಾಯಿಸುವಂತಹ ಕರಿಣ ಕಾನೂನು ತರಬೇಕು. ಪ್ರಜಾಪ್ರಭುತ್ವ ರೀತಿಯಲ್ಲಿ ಇಂತಹ ಉಗ್ರರನ್ನು ಖಂಡಿ ಸುವ ಕೆಲಸವಾದಾಗ ಮಾತ್ರ ಇಂತಹವರ ದಮನ ಸಾಧ್ಯ ಎಂದರು.

ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಬೆಳೆಯುತ್ತಿದೆ. ಪಾಕಿಸ್ತಾನದಲ್ಲಿ ಶೇ. 25 ರಷ್ಟು ಇದ್ದ ಹಿಂದೂಗಳು ಈಗ ಶೇ. 2.5 ರಷ್ಟು ಇಳಿದಿದ್ದಾರೆ. ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ. ರಾಷ್ಟ್ರದ್ರೋಹಿ ಗೂಂಡಾಗಳಿಗೆ ಸರಿಯಾದ ಪಾಠ ಕಲಿಸುತ್ತೇವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಸೂಡಾ ಅಧ್ಯಕ್ಷ ನಾಗರಾಜ್, ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ ಹಲವರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here