Home Hosanagara Ripponpet ಡಾ. ಬಿ.ಆರ್. ಅಂಬೇಡ್ಕರ್ ನಿಗಮದ ನಿರ್ದೇಶಕರ ಸೂಚನೆಯನ್ವಯ ಅರಸಾಳು ಸುಡುಗಾಡು ಸಿದ್ದರ ಆರ್ಥಿಕ ಸ್ಥಿತಿ-ಗತಿಯ ಅಧ್ಯಯನಕ್ಕೆ...
ರಿಪ್ಪನ್ಪೇಟೆ: ಕಳೆದ 30-40 ವರ್ಷಗಳಿಂದ ಅರಸಾಳು ರೈಲ್ವೆ ರಸ್ತೆಯಂಚಿನಲ್ಲಿ ಗುಡಿಸಲು (ಟೆಂಟ್) ಹಾಕಿಕೊಂಡು ಜೀವನ ಸಾಗಿಸುತ್ತಿರುವ ಅಲೆಮಾರಿ ಸುಡುಗಾಡು ಸಿದ್ದರ ಬಗ್ಗೆ ಸಮಗ್ರ ವರದಿ ಮಾಡಲಾಗಿದ್ದು ವರದಿಯನ್ನಾದರಿಸಿ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ನಿರ್ದೇಶಕರು ಸ್ಥಳೀಯ ಬಿಜೆಪಿ ಮುಖಂಡರಿಗೆ ಸ್ಥಳಕ್ಕೆ ಭೇಟಿ ನೀಡಿ ಅವರ ಆರ್ಥಿಕ ಸ್ಥಿತಿಗತಿಯನ್ನು ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿದರ ಮೇರೆಗೆ ಇಲ್ಲಿನ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಎಂ.ಬಿ.ಮಂಜುನಾಥ ಮತ್ತು ತಾಲ್ಲೂಕ್ ಪ್ರಧಾನ ಕಾರ್ಯದರ್ಶಿ ನಾಗಾರ್ಜುನಸ್ವಾಮಿ ಆಲವಳ್ಳಿ ದೇವೇಂದ್ರಪ್ಪಗೌಡ ನೆವಟೂರು ಭೇಟಿ ನೀಡಿ ಮಾಹಿತಿ ಪಡೆದರು.
ಅಲೆಮಾರಿ ಸುಡುಗಾಡು ಸಿದ್ದ ಜನಾಂಗದ ಮೂರು ನಾಲ್ಕು ಕುಟುಂಬಗಳು ಮಳೆ ಬಿಸಿಲು ಚಳಿ ಎನ್ನದೇ ರೈಲ್ವೆ ರಸ್ತೆಯ ಪಕ್ಕದ ದಿನ್ನೆಯ ಮೇಲೆ ಟೆಂಟ್ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಾ ಇದ್ದು ಇವರಿಗೆ ಸ್ಥಳೀಯಾಡಳಿತ ಯಾವುದೇ ಸೌಲಭ್ಯವನ್ನು ಕಲ್ಪಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ಹೇಳಲಾಗುತ್ತಿದ್ದು ಇವರು ಮತದಾನದ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯನ್ನು ಬಿಟ್ಟರೆ ಇನ್ನಾವುದೇ ಸರ್ಕಾರದ ಸೌಲಭ್ಯವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ.
ಈ ಬಗ್ಗೆ ಸೌಲಭ್ಯ ವಂಚಿತ ನಿರಾಶ್ರಿತ ‘ಅಲೆಮಾರಿ ಸುಡುಗಾಡು ಸಿದ್ದರ ಕುಟುಂಬ’ ಎಂಬ ಶೀರ್ಷೀಕೆಯಡಿ ಪ್ರಕಟವಾದ ವರದಿಯನ್ನು ಓದಿದ ನಿಗಮದ ನಿರ್ದೇಶಕರು ನಿಗಮದಲ್ಲಿ ದೊರೆಯಬಹುದಾದ ಸೌಲಭ್ಯವನ್ನು ಪಡೆಯಲು ಅರ್ಹರಾಗಿದ್ದಾರಾ ಎಂಬುದನ್ನು ಖುದ್ದು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರ ಮೇರೆಗೆ ಸ್ಥಳ ಪರಿಶೀಲನೆ ನಡೆಸಿ ಸೌಲಭ್ಯವಂಚಿತ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಿ ಗ್ರಾಮಾಡಳಿತವರು ಬೇರೆ ಕಡೆಯಲ್ಲಿ ನಿವೇಶನ ನೀಡಿ ಮನೆ ನಿರ್ಮಿಸಿ ಕೊಟ್ಟರೆ ಅಲ್ಲಿಗೆ ಹೋಗುತ್ತೀರಾ? ಎಂಬ ಪ್ರಶ್ನೆಗೆ ಹೌದು ಸ್ವಾಮಿ ನಮಗೆ ಮನೆಯೆಂಬುದು ಕನಸಿನ ಮಾತು ಇಟ್ಟು ವರ್ಷದಿಂದ ನಾವು ಸಾಕಷ್ಟು ಭಾರಿ ಗಮನಸೆಳೆಯಲಾದರೂ ಯಾರು ಕೇಳಿಲ್ಲಾ ಈಗಲಾದರೂ ತಮ್ಮಿಂದ ಮನೆಸೌಲಭ್ಯ ಸಿಕ್ಕರೆ ಸಾಕು ಸ್ವಾಮಿ ಎಂದು ವಯೋವೃದ್ದ ಮಹಿಳೆ ತನ್ನ ನೋವನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದರು.
ಮಗ ಸೊಸೆ ಹಾಗೂ ಮೊಮ್ಮಕ್ಕಳು ಹೀಗೆ ಮೂರು ನಾಲ್ಕು ಕುಟುಂಬಗಳಿಗೆ ಮನೆ ಕೊಡಿಸಿದರೆ ನಾವು ಹೋಗುವುದಾಗಿ ವಿವರಿಸಿ ಇನ್ನಾದರೂ ಕೇಂದ್ರ ಸರ್ಕಾರದ ರೈಲ್ವೆ ಅಧಿಕಾರಿಗಳಿಂದ ಮುಕ್ತಿಕೊಡಿಸಿ ಎಂದು ಅಲವತ್ತುಕೊಂಡರು ಈ ನಮ್ಮ ಸ್ಥಿತಿ-ಗತಿಯನ್ನು ನಾಡಿನ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿ ಜನಪ್ರತಿನಿಧಿಗಳ ಕಣ್ಣು ತೆರೆಸಿದ ಸಾಮಾಜಿಕ ನ್ಯಾಯಕೊಡಿಸಿದ ಪತ್ರಿಕೆಗೆ ನಮಸ್ಕಾರ ಸಾರ್. ಕಡೆಗೂ ನಮಗೆ ನ್ಯಾಯ ಸಿಕ್ಕುವುದೆ ? ಎಂದು ಉದ್ಘಾರ ವ್ಯಕ್ತಪಡಿಸಿದರು.
Related