20.6 C
Shimoga
Friday, December 9, 2022

ಡಿ.6ಕ್ಕೆ ಬೆಂಗಳೂರಿನಲ್ಲಿ ವಿವಿಧ ದಲಿತ ಸಂಘಟನೆಗಳಿಂದ ಬೃಹತ್ ಐಕ್ಯತಾ ಸಮಾವೇಶ ; ಕರ್ನಾಟಕ ಡಿಎಸ್‌ಎಸ್‌ನ ಜಿಲ್ಲಾ ಸಂಚಾಲಕ ಅರಳಸುರಳಿ ನಾಗರಾಜ್


ಹೊಸನಗರ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 66ನೇ ಪರಿನಿರ್ವಾಣ ದಿನದ ಅಂಗವಾಗಿ ಡಿ.6ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿವಿಧ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ ನಡೆಲಿದ್ದು, ತಾಲೂಕಿನಿಂದ ನೂರಾರು ಸಂಖ್ಯೆಯಲ್ಲಿ ದಲಿತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಅರಳಸುರಳಿ ನಾಗರಾಜ್ ತಿಳಿಸಿದರು.


ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದಲ್ಲಿ ಬ್ರಾಹ್ಮಣ್ಯ ಮತ್ತೆ ತನ್ನ ಕರಾಳ ಹಿಡಿತವನ್ನು ಸ್ಥಾಪಿಸುತ್ತಿದೆ. ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳು ದುರ್ಬಲಗೊಳಿಸುವ ಕಾರ್ಯ ನಡೆದಿದೆ. ಪರಿಣಾಮ, ದಲಿತ, ರೈತ, ಕಾರ್ಮಿಕ, ಮಹಿಳಾ ಹಾಗೂ ಆದಿವಾಸಿ-ಬುಡಕಟ್ಟು ಜನ ಸಮುದಾಯಗಳು ಹಸಿವು, ಅಸ್ಪೃಶ್ಯತೆ, ಅನಕ್ಷರತೆ, ಕೊಲೆ-ಸುಲಿಗೆ-ಅತ್ಯಾಚಾರ-ದೌಜನ್ಯಕ್ಕೆ ಒಳಗಾಗುತ್ತಿವೆ. ಚತುವರ್ಣ ಮರುಸ್ಥಾಪನೆಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆಯೂ ದಲಿತ, ಹಿಂದುಳಿತದವರನ್ನು ಗುರಿಯಾಗಿಸಿಕೊಂಡು ಮರುಳು ಮಾಡಲು ಹೊರಟಿವೆ. ಹಿಂದುತ್ವದ ಹೆಸರಿನಲ್ಲಿ ಅಲ್ಪ ಸಂಖ್ಯಾತರನ್ನು ಶತ್ರುಗಳಂತೆ ಬಿಂಬಿಸಲಾಗುತ್ತಿದ್ದು, ಕಾಶ್ಮೀರ, ಮಸೀದಿ-ಮಂದಿರ, ಗೋರಕ್ಷಣೆ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸುತ್ತಿದ್ದು, ಜನರಿಗೆ ಸತ್ಯ ಹೇಳಬೇಕಾಗಿದ್ದ ಮಾಧ್ಯಮಗಳನ್ನೆ ಬಿಜೆಪಿ ತನ್ನ ಕೈ ವಶ ಮಾಡಿಕೊಂಡಿರುವುದು ವಿರ‍್ಯಾಸವಾಗಿದೆ ಎಂದರು.


ಈ ಎಲ್ಲಾ ಹಿನ್ನೆಲೆಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ ವ್ಯಕ್ತ ಪಡಿಸಿ ಐಕ್ಯತಾ ಸಮಾವೇಶ ನಡೆಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಡಿಎಸ್‌ಎಸ್ ಸಂಚಾಲಕ ಡಿ. ಮಂಜುನಾಥ್, ಸಂಘಟನಾ ಸಮಿತಿಯ ರಾಮು ಆಚಾರ್ಯ, ಲಕ್ಷ್ಮಣ ಆಚಾರ್ಯ, ನಾಗೇಂದ್ರ, ಪ್ರವೀಣ್, ಉಮೇಶ್, ಸಂದೇಶ್ ಹೊಸಮನೆ, ಸತೀಶ್, ರಮ್ಯ ಮೊದಲಾದವರು ಇದ್ದರು.

ಪಿಎಲ್‌ಡಿ ಬ್ಯಾಂಕ್‌ನ ನಾಗರತ್ನ ರವರಿಗೆ ಉತ್ತಮ ಕೆಲಸಗಾರ್ತಿ ಪ್ರಶಸ್ತಿ

ಹೊಸನಗರ: ಸುಮಾರು ಮೂವತ್ತು ವರ್ಷಗಳ ಕಾಲ ಸುಧೀರ್ಘ ಪಿಕಾರ್ಡ್ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ಸಾರ್ವಜನಿಕರಿಗೆ ಹಾಗೂ ಬ್ಯಾಂಕ್‌ಗೆ ಬಂದ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಎಸ್ ನಾಗರತ್ನರವರನ್ನು 69ನೇ ಸಹಕಾರಿ ಸಪ್ತಾಹ ಕಾರ್ಯಕ್ರಮ ಹೊಸನಗರ ತಾಲ್ಲೂಕು ಬಟ್ಟೆಮಲ್ಲಪ್ಪದಲ್ಲಿ ನಡೆದಿದ್ದು ಈ ಸಮಾರಂಭದಲ್ಲಿ ಸನ್ಮಾನಿಸಿದರು.


ಈ ಸನ್ಮಾನ ಸಮಾರಂಭದಲ್ಲಿ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಆರ್.ಎಂ. ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಎಂ.ಎಂ.ಪರಮೇಶ್, ಕಳೂರು ಸೊಸೈಟಿಯ ಅಧ್ಯಕ್ಷರಾದ ದುಮ್ಮ ವಿನಯ್ ಕುಮಾರ್, ತುಂಗಾ ಅಡಿಕೆ ಮಂಡಿಯ ಹಾಲಗದ್ದೆ ಉಮೇಶ್, ಹರತಾಳು ನಾಗರಾಜ್, ಯುನಿಯನ್ ಬ್ಯಾಂಕ್ ಉಪಾಧ್ಯಕ್ಷರಾದ ವಾಟಗೋಡ್ ಸುರೇಶ್ ಇನ್ನೂ ಮುಂತಾದವರು ಸನ್ಮಾನಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!