ತಂದೆಯ ನಿರ್ಲಕ್ಷ್ಯಕ್ಕೆ ಬಲಿಯಾದ 08 ವರ್ಷದ ಬಾಲಕ ! ಹಾಗಾದ್ರೆ ಏನಾಯ್ತು?

0
3199

ಹೊಸನಗರ : ಹೆತ್ತ ತಂದೆಯ ನಿರ್ಲಕ್ಷ್ಯದಿಂದಾಗಿ ಬಾಲಕನೋರ್ವ ಮೃತಪಟ್ಟಿರುವ ದಾರುಣ ಘಟನೆಯೊಂದು ತಾಲೂಕಿನಲ್ಲಿ ನಡೆದಿದೆ.

ಏನಿದು ಘಟನೆ?

ತಾಲೂಕಿನ ಕಾನುಗೋಡು ಸಮೀಪ ತಿರುವಿನಲ್ಲಿ ಆಟೋ ರಿಕ್ಷಾದಿಂದ ಎಸೆದಂತಾಗಿ ರಸ್ತೆಗೆ ಬಿದ್ದ ಪ್ರಪಂಚವನ್ನೇ ಅರಿಯದ 08 ವರ್ಷದ ಅಮಾಯಕ ಬಾಲಕ ಆರ್ಯಗೌಡನ ತಲೆಗೆ ಹಾಗೂ ಎಡ ಕೆನ್ನೆಗೆ ಬಿದ್ದ ತೀವ್ರ ಪೆಟ್ಟಿನಿಂದಾಗಿ ಪ್ರಥಮ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾನೆ.

ಸೋಮವಾರ ರಾತ್ರಿ ಸುಮಾರು 08 ಗಂಟೆ ವೇಳೆ ದುಡುಕು ಹಾಗೂ ನಿರ್ಲಕ್ಷ್ಯತನದಿಂದ ಕೆಎ 15 ಎ1598 ಸಂಖ್ಯೆಯ ಪ್ಯಾಸೆಂಜರ್ ಆಟೋರಿಕ್ಷಾವನ್ನು ದುರ್ದೈವಿ ಮೃತ ಬಾಲಕನ ತಂದೆ ಮಂಜುನಾಥ ರವರು ಚಲಾಯಿಸುತ್ತಿದ್ದರೆಂದು ತಿಳಿದುಬಂದಿದ್ದು ವೇಗವಾಗಿ ಬಂದ ರಿಕ್ಷಾವನ್ನು ಏಕಾಏಕಿ ಬಲಕ್ಕೆ ತಿರುಗಿಸಿದ ಪರಿಣಾಮ ಹಿಂಬದಿ ಕುಳಿತಿದ್ದ ಆರ್ಯಗೌಡ ಏಕಾಏಕಿ ರಸ್ತೆಗೆ ಎಸೆದಂತಾಗಿ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ನಂತರ ಗಂಭೀರ ಸ್ಥಿತಿಯಲ್ಲಿದ್ದ ಬಾಲಕನನ್ನು ಮಾಸ್ತಿಕಟ್ಟೆಯ ಖಾಸಗಿ ಕ್ಲಿನಿಕ್ ನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹೊಸನಗರ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಅಸುನೀಗಿರುವುದಾಗಿ ತಿಳಿದುಬಂದಿದೆ.

ಈ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರಕ್ಷಕ ವೃತ್ತ ನಿರೀಕ್ಷಕ ಜಿ‌.ಕೆ ಮಧುಸೂದನ್ ಮುಂದಿನ ಕ್ರಮಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here