ಮಗುವಿಗೆ ಬಿಸಿ ನೀರಿನಿಂದ ಸ್ನಾನ ಮಾಡಿಸಿದ್ದೇ ಈಕೆಯ ಸಾವಿಗೆ ಕಾರಣವಾಯ್ತ ? ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ! ಏನಿದು ಸ್ಟೋರಿ ?

0
115326

ಕೊಪ್ಪ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸುಮಾ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದು, ಇಂದು ಬೆಳಿಗ್ಗೆ ಕುದುರೆಗುಂಡಿಯಲ್ಲಿರುವ ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವೇಲ್‌ನಿಂದ ನೇಣು ಹಾಕಿಕೊಂಡಿದ್ದಾಳೆ.

ಬೆಳಿಗ್ಗೆ ಮನೆಯಲ್ಲಿ ಸುಮಾ ತನ್ನ ಅಕ್ಕನ ಮಗು ಸ್ನಾನಕ್ಕೆ ನೀರನ್ನು ಬಿಸಿ ಮಾಡಿ ತಂದಿಟ್ಟಿದ್ದು, ಅದೇ ನೀರಿನಿಂದ ಆರು ತಿಂಗಳ ಮಗುವನ್ನು ಸ್ನಾನ ಮಾಡಿಸಿದ್ದು ಬಿಸಿ ನೀರಿನ ಪರಿಣಾಮ ಮಗುವಿನ ಎದೆ ಭಾಗದಲ್ಲಿ ಬೊಬ್ಬೆ ಕಂಡು ಬಂದಿದೆ. ತಕ್ಷಣ ಮಗುವಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಕೊಪ್ಪ ಸರ್ಕಾರಿ ಆಸ್ಪತ್ರೆ ಕೆರೆದುಕೊಂಡು ಹೋಗಿದ್ದಾರೆ. ಮಗುವಿಗೆ ಏನಾದರೂ ಅನಾಹುತ ಸಂಭವಿಸಬಹುದು ಎಂದು ಹೆದರಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೊಪ್ಪ ಪೊಲೀಸರು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here