ತನ್ನ ಪುಟ್ಟ ಮಗಳ ಬಳಿ ಬೀಡಿ ಸೇದಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತಿ ಮೆರೆದ ತಂದೆ !

0
990

ಮೂಡಿಗೆರೆ : ಏನು ತಿಳಿಯದಂತಹ ತನ್ನ ಪುಟ್ಟ ಮಗಳ ಕೈಗೆ ಬೀಡಿಯನ್ನು ಸೇದಲು ಕೊಟ್ಟು ಮೂಗಿನ ಮೂಲಕ ಹೊಗೆ ಬಿಡು ಎಂದು ಆಕೆಯ ತಂದೆಯೇ ಪ್ರೋತ್ಸಾಹಿಸಿದಂತಹ ಬೇಸರ ತರಿಸುವ ಘಟನೆಯೊಂದು ತಾಲ್ಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ಅಂಗಡಿ ಗ್ರಾಮದ ಸಮೀಪದಲ್ಲಿ ಇರುವಂತಹ ಜಾಣಿಗಿ ಊರಿನಲ್ಲಿ ಈ ಘಟನೆ ನಡೆದಿದ್ದು, ಮಕ್ಕಳ ಮುಂದೆ ಧೂಮಪಾನ, ಮದ್ಯಪಾನ ಮಾಡುವುದೇ ತಪ್ಪು. ಅಂತಹದರಲ್ಲಿ ತಂದೆಯೇ ತನ್ನ ಮಗಳಿಗೆ ಬೀಡಿ ಸೇದಲು ಹೇಳಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟುದ್ದು ಈಗ ವ್ಯಾಪಕವಾಗಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ.

ಈ ಕೆಲಸವನ್ನು ಮಾಡಿಸಿದವರು ಯಾರೇ ಆಗಲಿ ಅವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಮುಂದಿನ ದಿನಗಳಲ್ಲಿ ಈ ರೀತಿಯ ಕೆಲಸ ಮಾಡಿಸುವವರು ಕಾನೂನಿಗೆ ಹೆದರಬೇಕು ಎಂಬ ಆಗ್ರಹವನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here