ತನ್ನ ವಾಹನಕ್ಕೆ ಸರ್ಕಾರಿ ಲಾಂಛನ ಹಾಕಿಕೊಂಡ ಪ್ರವಾಸಕ್ಕೆ ಬಂದ ಗ್ರಾಮ ಪಂಚಾಯತಿ ಅಧ್ಯಕ್ಷ !

0
966

ಮೂಡಿಗೆರೆ: ಗ್ರಾಮ ಪಂಚಾಯತಿ ಅಧ್ಯಕ್ಷನೊಬ್ಬ ಸರ್ಕಾರಿ ಲಾಂಛನವನ್ನು ತನ್ನ ವಾಹನಕ್ಕೆ ಹಾಕಿಕೊಂಡು ಪ್ರವಾಸಕ್ಕೆ ಬಂದಿರುವ ಘಟನೆ ನಡೆದಿದೆ.

ಗ್ರಾಮ ಪಂಚಾಯತಿ ಅಧ್ಯಕ್ಷರು ಎಂಬ ನಾಮಫಲಕ ಮತ್ತು ಸರ್ಕಾರದ ಲಾಂಛನವನ್ನು ಹಾಕಿಕೊಂಡು ತಾಲ್ಲೂಕಿನ ಕೊಟ್ಟಿಗೆಹಾರ ಮಾರ್ಗವಾಗಿ ಹೊರನಾಡಿಗೆ ಸಾಗುವ ಮಾರ್ಗ ಮಧ್ಯೆ ಕೊಟ್ಟಿಗೆಹಾರದಲ್ಲಿ ಈ ವಾಹನ ಕಂಡಿದ್ದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

ವಾಹನದ ಹಿಂಬದಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಳೇಬೀಡು ಹುಣಸೂರು ತಾಲ್ಲೂಕು ಎಂದು ಹಾಕಲಾಗಿದ್ದು ಮುಂಭಾಗದಲ್ಲಿ ಹೆಸರಿನ ಜೊತೆಗೆ ರಾಜ್ಯ ಸರ್ಕಾರದ ಲಾಂಛನವನ್ನು ಹಾಕಲಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಾಹನಗಳನ್ನು ಹೊರತು ಪಡಿಸಿ ಇತರ ವಾಹನಗಳಲ್ಲಿ ಸರ್ಕಾರಿ ಲಾಂಛನವನ್ನು ಬಳಸುವಂತಿಲ್ಲ ಎಂಬ ನಿಯಮವಿದ್ದರೂ ಕೂಡ ಹುಣಸೂರು ತಾಲ್ಲೂಕಿನ ಹಳೆಬೀಡು ಗ್ರಾಮ ಪಂಚಾಯತಿ ಅಧ್ಯಕ್ಷ ತನ್ನ ಖಾಸಗಿ ವಾಹನಕ್ಕೆ ಸರ್ಕಾರಿ ಲಾಂಛನ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here