23.2 C
Shimoga
Sunday, November 27, 2022

ತನ್ನ ಸಹೋದರಿಯ ಫೋಟೋ ಸೋಶಿಯಲ್ ಮೀಡಿಯಾಗೆ ಹಾಕಿದಕ್ಕೆ ಲವ್ ಜಿಹಾದ್ ಪಿತೂರಿ ಎಂದು ಯುವತಿಯ ಅಣ್ಣ ದೂರು ದಾಖಲು !

ಕೊಪ್ಪ: ತನ್ನ ಸಹೋದರಿಯ ಫೋಟೋ ಸೋಶಿಯಲ್ ಮೀಡಿಯಾಗೆ ಹಾಕಿದಕ್ಕೆ ಲವ್ ಜಿಹಾದ್ ಪಿತೂರಿ ಎಂದು ಯುವತಿಯ ಅಣ್ಣನಿಂದ ದೂರು ದಾಖಲಿಸಿದ ಬಗ್ಗೆ ವರದಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಹೋದರಿಯ ಫೋಟೋ ಹಾಕಿದ ಆರೋಪಕ್ಕೆ ಸಂಬಂಧಿಸಿ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ರೋಫ್ ಎಂಬುವನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಯುವತಿಯ ಅಣ್ಣನ ದೂರಿನ ಮೇರೆಗೆ ಮೊಹಮ್ಮದ್ ರೋಫ್, ಇನ್ಸ್‌ಪೆಕ್ಟರ್ ಜಾಕೀರ್ ಹುಸೇನ್ ವಿರುದ್ಧವೂ ದೂರು ದಾಖಲಾಗಿದೆ.

ಈ ಸಂಬಂಧ ಅಕ್ಟೋಬರ್‌ 30ರಂದು ಸಿಇಎನ್‌ ಠಾಣೆಗೆ ದೂರು ನೀಡಿದರೂ, ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ದೂರು ನೀಡಿ ತಿಂಗಳು ಕಳೆದರೂ ಸಿಇಎನ್‌ ಠಾಣಾಧಿಕಾರಿ ಜಾಕೀರ್‌ ಹುಸೇನ್‌ ನೆಪ ಮಾತ್ರಕ್ಕೆ ಭರವಸೆ ನೀಡಿದ್ದಾರೆ. ಆದರೆ, ಈ ಕ್ಷಣದವರೆಗೆ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಯುವತಿಯ ಸಹೋದರ ಎಸ್ಪಿಗೂ ಲಿಖಿತ ದೂರು ನೀಡಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!