“ತಾಯಿ – ತಂದೆಯರೆ ನಮ್ಮ ಮಕ್ಕಳಿಗೆ ವೈರಿಗಳು” ; ಸಚಿವ ಆರಗ ಜ್ಞಾನೇಂದ್ರ

0
498

– ನಗರ, ಹುಂಚ ಹೋಬಳಿ ನನಗೆ ಎರಡು ಕಣ್ಣು ಇದ್ದಂತೆ…..

ರಿಪ್ಪನ್‌ಪೇಟೆ: ಸರ್ಕಾರ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಯೋಜನೆಗಳನ್ನು ಅನುಷ್ಟಾನಗೊಳಿಸಿ ಶಿಕ್ಷಕರುಗಳಿಗೆ ತರಬೇತಿ ನೀಡುವ ಮೂಲಕ ಹೆಚ್ಚಿನ ವೇತನ ನೀಡುತ್ತಿದ್ದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುತ್ತಿದ್ದರು ತಾಯಿ-ತಂದೆಯವರು ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದಾಖಲಿಸುತ್ತಿರುವುದರ ಬಗ್ಗೆ ತೀವ್ರ ಅಸಮಾಧಾನವನ್ನು ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರ ವ್ಯಕ್ತಪಡಿಸಿದರು.

ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬರುವ ಯಳಗಲ್ಲು ಗ್ರಾಮದಲ್ಲಿ ಸುಮಾರು 26.50 ಕೋಟಿ ರೂ. ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಶಂಕುಸ್ಥಾಪನೆ ಮತ್ತು ಕೋಡೂರು ಗ್ರಾಮದ ಸ.ನಂ.14ರಲ್ಲಿ ಪಿಕಪ್ ಚಾನಲ್ ಕಾಮಗಾರಿ ಶ್ರೀ ಶಂಕರೇಶ್ವರ ದೇವಸ್ಥಾನದ ರಸ್ತೆ, ಹಳೇಕೋಟೆ ರಸ್ತೆ ಮರು ಡಾಂಬರಿಕರಣ ಕಾಮಗಾರಿ ಗುದ್ದಲಿಪೂಜೆ, ಶಾಖವಳ್ಳಿ – ಕೋಡೂರು ರಸ್ತೆ, ಹಿಂಡ್ಲೆಮನೆ ಸರ್ಕಾರಿ ಶಾಲೆಯ ಹೆಚ್ಚುವರಿ ಕೊಠಡಿ, ಕೆ.ಕುನ್ನೂರು ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ 94ಸಿ ಅಡಿ 23 ಜನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಯೆ ಬಿಜೆಪಿ ಸರಕಾರಗಳ ಮೊದಲ ಆದ್ಯತೆಯಾಗಿದೆ.

ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಕೊರೊನಾದಂತಹ ಕ್ಲಿಷ್ಟಕರ ಸಂದರ್ಭದಲ್ಲಿಯೂ ಜನರ ಜೀವನದ ಬಗ್ಗೆ ಹೆಚ್ಚು ಆದ್ಯತೆ ನೀಡಿ ದೇಶದಲ್ಲಿಯೆ 150ಕೋಟಿ ಜನರಿಗೆ ಉಚಿತ ಕೊರೊನಾ ಲಸಿಕೆ ನೀಡುವ ಮೂಲಕ 5ಲಕ್ಷ ಕೋಟಿ ಹಣ ವ್ಯಯ ಮಾಡಿದ್ದರು. ಮೋದಿ ಸರ್ಕಾರವನ್ನು ಟೀಕಿಸುವ ವಿರೋಧ ಪಕ್ಷಗಳ ಬಗ್ಗೆ ನಾಡಿನ ಜನರಿಗೆ ಮೋದಿ ಸರ್ಕರದ ಬಗ್ಗೆ ಏನು ಎಂಬುದು ಅರ್ಥವಾಗಿದೆ ಎಂದರು.

ನಾನು ಗೃಹಸಚಿವ, ರಕ್ಷಣಾ ಇಲಾಖೆಯವರಿಗೆ ಮಾತ್ರ ಅನುದಾನ ನೀಡಬಹುದು:

ನನಗೆ ಸರ್ಕಾರದಿಂದ ಇಲಾಖೆಗೆ ಅನುದಾನ ನೀಡುತ್ತದೆ ಆದರೆ ಅದನ್ನು ಇಲಾಖೆಗೆ ಖರ್ಚು ಮಾಡಬೇಕು ಆದರೆ ನಾನು ಮೈಯಾಳು ಮಾಡಿಕೊಂಡು ಬೇರೆ ಇಲಾಖೆಯವರ ಸಚಿವ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಕ್ಷೇತ್ರದ ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡಿಸಿಕೊಂಡು ಸಹೋದ್ಯೋಗಿಗಳಿಗೆ ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಪೊಲೀಸ್ ಅಧಿಕಾರಿಯನ್ನು ವರ್ಗಾಯಿಸಲು ಮೈಯಾಳು ಮಾಡಿಕೊಂಡಿದ್ದೇನೆ ಎಂದು ಸಾರ್ವಜನಿಕರೆದುರು ಹಾಸ್ಯ ಚಟಾಕಿ ಹಾರಿಸಿದರು.

ದಲಿತರ ಸಾಮಾನ್ಯ ಮಕ್ಕಳಿಗೆ ವಿದ್ಯೆ ಕೊಟ್ಟರೆ ಬದುಕಿರುವವರೆಗೂ ಇರುತ್ತದೆ ಮಕ್ಕಳಿರುವಾಗಲೇ ಸಂಸ್ಕಾರವಿತ ಬದುಕಿಗೆ ಶಿಕ್ಷಣ ಅಗತ್ಯತೆ ಇದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣದ ಪ್ರಗತಿಗೆ ಹೆಚ್ಚು ಆದ್ಯತೆ ನೀಡಿವೆ ಎಂದರು.

ನಗರ, ಹುಂಚ ಹೋಬಳಿ ನನಗೆ ಎರಡು ಕಣ್ಣು ಇದ್ದಂತೆ:

ನಾನು ತೀರ್ಥಹಳ್ಳಿ ಕ್ಷೇತ್ರದ ಶಾಸಕನಾಗಿದ್ದರು ಹೊಸನಗರ ತಾಲೂಕಿನ ನಗರ ಮತ್ತು ಹುಂಚ ಹೋಬಳಿಗಳನ್ನು ಅಭಿವೃದ್ದಿಯಲ್ಲಿ ಕಡೆಗಣಿಸಲಾಗಿದೆ ಎಂದು ಮತದಾರರು ಆಡಿಕೊಳ್ಳುತ್ತಿದ್ದರು ಆದರೆ ನನ್ನ ಗೆಲುವಿಗೆ ತೀರ್ಥಹಳ್ಳಿ ಸೇರಿದಂತೆ ನಗರ ಮತ್ತು ಹುಂಚ ಹೋಬಳಿ ಮತದಾರರು ಬೆಂಬಲಿಸಿದ್ದಾರೆ ಈ ಎರಡು ಹೋಬಳಿಗಳ ಮತದಾರರು ನನಗೆ ಕಣ್ಣು, ಕಿವಿ, ಮೂಗು ಇದ್ದಂತೆ ಎಂದರು.

ಸಾಗರ ಕ್ಷೇತ್ರದ ಶಾಸಕ, ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ವಸತಿ ಶಾಲೆಗಳು ಸದಾ ಕ್ರಿಯಾಶೀಲ ಚಟುವಟಿಕೆ ಕೇಂದ್ರಗಳಾಗಬೇಕು. ಈಗಾಗಲೇ ಬಗರು ಹುಕಂ ಉಪಸಮಿತಿಯನ್ನು ರಚಿಸಲಾಗಿದ್ದು ಉಪಸಮಿತಿಯ ವರದಿಯನ್ನಾಧರಿಸಿ ಕಾನು ಕರಾಬ್, ಅರಣ್ಯ, ಗೋಮಾಳ, ಡೀಮ್ಡ್ ಫಾರೆಸ್ಟ್ ಹೀಗೆ ಅರಣ್ಯ ಇಲಾಖೆಯವರ ಜಾಗದಿಂದಾಗಿ ಸಾಗುವಳಿದಾರರು ಹಕ್ಕು ಪತ್ರಕ್ಕಾಗಿ ಪರದಾಡುವಂತಾಗಿದೆ. ಈ ಬಗ್ಗೆ ಕಾನೂನಿನ ತೊಡಿಕಿನಿಂದಾಗಿ ಮಂಜುರಾತಿ ಪತ್ರ ನೀಡಲು ಅಡಚಣೆಯಾಗುತ್ತಿದೆ. ಈ ಹಿಂದಿನ ಸರ್ಕಾರಗಳು ಬಗರ್ ಹುಕುಂ ಹೆಸರಿನಲ್ಲಿ ಕಾಲ ಕಳೆದರೆ ಹೊರತು ಯಾವುದನ್ನು ಅನುಷ್ಠಾನ ಮಾಡಲು ತಯಾರಿರಲಿಲ್ಲ. ಈಗಿನ ಸರ್ಕಾರದ ಮುಖ್ಯಮಂತ್ರಿಗಳು, ಕಂದಾಯ ಸಚಿವರ ನೇತೃತ್ವದಲ್ಲಿ ಉಪಸಮಿತಿಯನ್ನು ರಚಿಸಲಾಗಿದ್ದು ಮುಂದಿನ ಒಂದೆರಡು ತಿಂಗಳಲ್ಲಿ ಅರಣ್ಯ ಒತ್ತುವರಿ ಮತ್ತು ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆಗೆ ಪರಿಹಾರ ದೊರಯುವುದೆಂದು ಆಶಾಭಾವನೆ ವ್ಯಕ್ತಪಡಿಸಿದರು.

ಕೋಡೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಂದಮ್ಮ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ನಿಗಮದ ನಿರ್ದೇಶಕ ಎನ್.ಆರ್.ದೇವಾನಂದ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್.ಕೆ, ತಹಶೀಲ್ದಾರ್ ಎಸ್.ವಿ.ರಾಜೀವ್, ತಾ.ಪಂ.ಇಒ ಸಿ.ಆರ್.ಪ್ರವೀಣ್‌ಕುಮಾರ್, ಗ್ರಾ.ಪಂ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here