ತಾಲ್ಲೂಕಿನಲ್ಲಿ ಮುಂಗಾರು ಎದುರಿಸಲು ಎಲ್ಲಾ ಮುಂಜಾಗರೂಕತೆ ವಹಿಸಲು ಅಧಿಕಾರಿಗಳಿಗೆ ಸೂಚನೆ: ತಹಶೀಲ್ದಾರ್ ವಿ.ಎಸ್. ರಾಜೀವ್

0
246

ಹೊಸನಗರ: ತಾಲ್ಲೂಕಿನಲ್ಲಿ ಮೂರು ದಿನಗಳಿಂದ ಮಳೆ ಬರುತ್ತಿದ್ದು ಅದರಲ್ಲಿಯು ಸೋಮವಾರ ರಾತ್ರಿ ಗಾಳಿ ಮಳೆಗೆ ಕೆಲವು ಮರಗಳು ಮನೆಗಳ ಮೇಲೆ ಲೈಟ್ ಕಂಬಗಳ ಮೇಲೆ ಉರುಳಿದ್ದು ಆದರೆ ಯಾವುದೇ ಅಪಾಯವಾದ ಘಟನೆ ನಡೆದಿಲ್ಲ. ಈ ಬಾರಿ ಮುಂಗಾರು ಮೇ ತಿಂಗಳಲ್ಲಿಯೇ ಪ್ರಾರಂಭವಾಗುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು ಅದರಂತೆ ತಾಲ್ಲೂಕಿನ ಎಲ್ಲ ಅಧಿಕಾರಿಗಳಿಗೆ ಮುಂಗಾರು ಎದುರಿಸಲು ಸಾನಿಧ್ಯವಾಗಿರುವುವಂತೆ ತಿಳಿಸಲಾಗಿದೆ ಎಂದು ತಹಶೀಲ್ದಾರ್ ವಿ.ಎಸ್. ರಾಜೀವ್‌ರವರು ತಿಳಿಸಿದ್ದಾರೆ.

ಅವರು ತಾಲ್ಲೂಕು ಕಛೇರಿಯ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲ್ಲೂಕು ಕಛೇರಿಯ ಸಿಬ್ಬಂದಿಗಳು ಮುಂಗಾರು ಎದುರಿಸಲು ಸಿದ್ಧರಾಗಿದ್ದು ಮುಂಗಾರು ಹಂಗಾಮಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಒಂದು ವಾರದ ಒಳಗೆ ಯೋಜನೆ ಸಿದ್ದಪಡಿಸಿಕೊಳ್ಳಲಿದ್ದು ಅಗತ್ಯ ಬಿದ್ದರೆ ಗಂಜಿ ಕೇಂದ್ರಗಳನ್ನು ಆಯಾಯ ಶಾಲೆಯ ಆವರಣದಲ್ಲಿ ಹಾಗೂ ಸೂಕ್ತ ಪ್ರದೇಶದಲ್ಲಿ ತೆರೆಯಲು ಅಧಿಕಾರಿಗಳಿಗೆ ಅನುಮತಿ ಈಗಾಗಲೇ ನೀಡಲಾಗಿದೆ ನಮ್ಮ ಕಂದಾಯ ಇಲಾಖೆಯ ನೌಕರ ವರ್ಗ ದಿನದ 24ಗಂಟೆಯು ಅತೀವೃಷ್ಟಿ ವಿರುದ್ಧ ಸೇವೆ ಸಲ್ಲಿಸಲಿದ್ದು ಅತೀ ವೃಷ್ಠಿಯಿಂದ ಹಾನಿಯಾದಲ್ಲಿ ತಕ್ಷಣ ಸರ್ಕಾರದ ವತಿಯಿಂದ ಪರಿಹಾರ ಕಾರ್ಯ ತಾಲ್ಲೂಕು ಕಛೇರಿಯಿಂದ ನಡೆಯಲಿದೆ ಸಾರ್ವಜನಿಕರು ಹಳ್ಳಿಗಳಲ್ಲಿ ಗ್ರಾಮಗಳಲ್ಲಿ ನೀರು ಹರಿಯುವ ಜಾಗಕ್ಕೆ ಹೋಗದೆ ತುರ್ತು ಸಂದರ್ಭದಲ್ಲಿ ತಾಲ್ಲೂಕು ಕಛೇರಿಯ ಅಧಿಕಾರಿಗಳನ್ನು ಹಾಗೂ ಆಯಾಯ ಗ್ರಾಮ ಲೆಕ್ಕಾಧಿಕಾರಿ, ಆರ್‌ಐಗಳ ಗಮನಕ್ಕೆ ತರಬೇಕೆಂದರು.

ಜಾಹಿರಾತು

LEAVE A REPLY

Please enter your comment!
Please enter your name here