ತಾಲ್ಲೂಕಿನ ಜನಸೇವೆ ಮಾಡುವ ಯೋಗ ಕೂಡಿ ಬಂದಿದೆ: ಅಶೋಕ್ ಗುಳೆದ್

0
160

ಹೊಸನಗರ: ನಾನು ಇಷ್ಟು ವರ್ಷಗಳ ಕಾಲ ಸರ್ಕಾರಿ ಗ್ರಂಥಾಲಯದ ಗ್ರಂಥಾಪಾಲಕನಾಗಿ ಸೇವೆ ಸಲ್ಲಿಸಿದ್ದು ನನಗೆ ತೃಪ್ತಿ ತಂದಿದೆ ಸರ್ಕಾರಿ ಕೆಲಸದಲ್ಲಿದ್ದರಿಂದ ಹೆಚ್ಚಿನ ಜನ ಸೇವೆ ಮಾಡಲು ಸಾದ್ಯವಾಗಿಲ್ಲ ಈಗ ನಾನು ಸರ್ಕಾರಿ ಕೆಲಸದಿಂದ ನಿವೃತ್ತಿ ಹೊಂದಿರುವುದರಿಂದ ಸಂಘ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನ ಸೇವೆ ಮಾಡುವ ಯೋಗ ಕೂಡಿ ಬಂದಿದೆ ಹೊಸನಗರ ತಾಲ್ಲೂಕು ರೆಡ್ ಕ್ರಾಸ್ ಸಂಸ್ಥೆ ನನಗೆ ಸಭಾಪತಿಯ ಸ್ಥಾನ ನೀಡಿದೆ ಮುಂದಿನ ದಿನದಲ್ಲಿ ನನ್ನ ಜೀವನವೆಲ್ಲ ಜನ ಸೇವೆಗಾಗಿ ಮಿಸಲಿಡುತ್ತೇನೆ ಎಂದು ನಿವೃತ್ತ ಗಂಥಾಪಾಲಕ ಹಾಗೂ ನೂತನ ಸಬಾಪತಿಯಾಗಿ ರೆಡ್ ಕ್ರಾಸ್ ಸಂಸ್ಥೆಗೆ ಆಯ್ಕೆಯಾಗಿರುವ ಅಶೋಕ್ ಗುಳೆದ್‌ರವರು ಹೇಳಿದರು.

ಹೊಸನಗರದ ತಾಲ್ಲೂಕು ಕಛೇರಿಯಲ್ಲಿ ಕರ್ನಾಟಕ ರಾಜ್ಯ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಕೋವಿಡ್ ಸಂರಕ್ಷಣೆಯ ಪರಿಕರಗಳನ್ನು ರಾಜ್ಯ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಛೇರ್ಮನ್ ಡಾ|| ಕುಮಾರ್‌ರವರು ತಾಲ್ಲೂಕು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಬಾಪತಿಯವರಿಗೆ ಅಧಿಕಾರ ಹಸ್ತಾಂತರಿಸಿದ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಉಪಸಭಾಪತಿ ಕೆ.ಜಿ.ನಾಗೇಶ್, ಗೌರವ ಕಾರ್ಯದರ್ಶಿ ದೀಪಕ್ ಎಂ, ಕೋಶಾಧಿಕಾರಿ ಹೆಚ್.ಆರ್. ಪ್ರಕಾಶ್, ನಿರ್ದೆಶಕರುಗಳಾದ ಸದಾಶಿವ ಶ್ರೇಷ್ಟಿ, ಅಶ್ವಿನಿಕುಮಾರ್, ರೇವಣ್ಣಪ್ಪ ಗೌಡ, ಗೌತಮ್, ಪ್ರವೀಣ್‌ಕುಮಾರ್, ಶ್ರೀಧರ ಉಡುಪ, ಮಾರ್ಷಲ್ ಶರಾಮ್, ಸಂತೋಷ್ ಕಾಮತ್, ನೂರ ಮೇಟಿಲ್ಡಾ ಸ್ವೀಕ್ವೆರ, ಜಿಲ್ಲಾ ಸಂಸ್ಥೆಯ ಅಹಮ್ಮದ್ ಬೇಗ್, ತರಬೇತುದಾರರಾದ ದೇವರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here