ಹೊಸನಗರ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿ ಎನ್.ವರ್ತೇಶ್ ಆಯ್ಕೆ

0
623

ರಿಪ್ಪನ್‌ಪೇಟೆ: ಹೊಸನಗರ ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿ ಎನ್.ವರ್ತೇಶ್‌ ಮಳಲಿಕೊಪ್ಪ ಇವರನ್ನು ರಾಜ್ಯ ಜೆಡಿಎಸ್ ಮುಖಂಡರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇಮಕಮಾಡಿ ಆದೇಶ ಹೊರಡಿಸಿದ್ದಾರೆ.

ಅವರ ಆದೇಶದಂತೆ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಆಯ್ಕೆ ಮಾಡಿದ್ದು ಇವರು ಕಳೆದ ಹಲವಾರು ವರ್ಷಗಳಿಂದ ಸಕ್ರಿಯ ಕಾರ್ಯಕರ್ತರಾಗಿ, ಯುವ ಜನತಾದಳ ತಾಲ್ಲೂಕು ಅಧ್ಯಕ್ಷರಾಗಿ, ಹೊಸನಗರ ತಾಲ್ಲೂಕ್ ಯುವಘಟಕದ ಅಧ್ಯಕ್ಷರಾಗಿ, ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ, ವಿಎಸ್‌ಎಸ್‌ಎನ್‌ಬಿಯ ನಿರ್ದೇಶಕರಾಗಿ ವೀರಶೈವ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ, ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರಾಗಿ, ಮಂಗಳಕಲಾ ಸಾಹಿತ್ಯ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಶ್ರೀವರಸಿದ್ದಿವಿನಾಯಕ ಸೇವಾ ಸಮಿತಿ ನಿರ್ದೇಶಕರಾಗಿದ್ದು ಅಲ್ಲದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯಾಗಿರುವ ಇವರನ್ನು ಪಕ್ಷದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದನ್ನು ಅಭಿಮಾನಿಬಳಗ ಅಭಿನಂದಿಸಿದೆ.

ತಾಲ್ಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಎಂ.ವಿ.ಜಯರಾಂ, ರಾಜ್ಯ ಮುಖಂಡ ಆರ್.ಎ.ಚಾಬುಸಾಬ್, ಮಹಿಳಾ ಮುಖಂಡರಾದ ಸುಮತಿ ಆರ್.ಪೂಜಾರ್, ಭಾಗ್ಯಗೋಪಾಲ್, ಜಿ.ಎಸ್.ವರದರಾಜ್, ಆರ್.ಎನ್.ಮಂಜುನಾಥ, ಕಲ್ಲೂರು ಈರಪ್ಪ, ಮಳವಳ್ಳಿ ಗೋಪಾಲ್, ಜಯನಗರ ಷಣ್ಮುಖ, ಇನ್ನಿತರರು, ಪಕ್ಷದ ಮುಖಂಡರು ಹಾಜರಿದ್ದು ಅಭಿನಂದಿಸಿ ಶುಭ ಹಾರೈಸಿದರು.

ಜಾಹಿರಾತು

LEAVE A REPLY

Please enter your comment!
Please enter your name here