ತಿರುವಿನಲ್ಲಿ ನಿಯಂತ್ರಣ ತಪ್ಪಿ ಬಸ್ಸಿಗೆ ಗುದ್ದಿದ ಪಿಕಪ್ ವಾಹನ ; ಚಾಲಕನಿಗೆ ಗಾಯ

0
519

ಮೂಡಿಗೆರೆ : ತಾಲ್ಲೂಕಿನ ಕುದ್ರೆಗುಂಡಿ ತೋಟದ ಬಳಿಯ ತಿರುವಿನಲ್ಲಿ ಪಿಕಪ್ ವಾಹನ ಒಂದು ನಿಯಂತ್ರಣ ತಪ್ಪಿ ಸಾರಿಗೆ ಬಸ್ಸಿಗೆ ಗುದ್ದಿರುವ ಘಟನೆ ನಡೆದಿದೆ.

ಬಸ್ಸಿಗೆ ಪಿಕಪ್ ವಾಹನ ಗುದ್ದಿದರ ಪರಿಣಾಮ ಪಿಕಪ್ ವಾಹನದ ಮುಂಭಾಗ ಜಖಂ ಆಗಿದ್ದು ಅದರ ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಬಸ್ಸಿಗು ಹಾನಿಯಾದ್ದು ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ.

ತಿರುವಿನಲ್ಲಿ ಎರಡೂ ವಾಹನಗಳು ರಭಸದಿಂದ ಬಂದಿದ್ದು ಬಸ್ಸಿನ ಬಲ ಭಾಗಕ್ಕೆ ಪಿಕಪ್ ಡಿಕ್ಕಿ ಹೊಡೆದಿದೆ. ಪಿಕಪ್ ಹಾಗೂ ಬಸ್ ಎರಡೂ ವೇಗವಾಗಿ ಬರುತ್ತಿದ್ದ ಕಾರಣ ನಿಯಂತ್ರಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದ್ದು ಈ ಅಪಘಾತದಿಂದ ಚಿಕ್ಕಮಗಳೂರು ಮೂಡಿಗೆರೆ ರಸ್ತೆಯ ಕೆಲಕಾಲ ಟ್ರಾಫಿಕ್ ಜಾಮ್ ಆಗಿದ್ದು ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನು ತೆರವುಗಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here