ನೀರು, ವಿದ್ಯುತ್ ಒದಗಿಸಿ ಜನರ ಜೀವ ಉಳಿಸಿ ಗ್ರಾ.ಪಂ. ಎದುರು ಗ್ರಾಮಸ್ಥರ ಪ್ರತಿಭಟನೆ

0 825

ಹೊಸನಗರ: ಸಮರ್ಪಕವಾಗಿ ನೀರು, ವಿದ್ಯುತ್ ಒದಗಿಸಿ ಇಲ್ಲವಾದರೆ ಗ್ರಾಮ ಪಂಚಾಯತಿ ಬಾಗಿಲು ಹಾಕಿ ಎಂದು ಸಾಲಗೇರಿ ಗ್ರಾಮಸ್ಥರು ಘೋಷಣೆ ಕೂಗುವುದರೊಂದಿಗೆ ಮೇಲಿನಬೆಸಿಗೆ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರಾದ ಮಂಜುನಾಥ್‌, ಸಾಲಗೇರಿ ಗ್ರಾಮಕ್ಕೆ ಒಂದು ವರ್ಷದಿಂದ ಸರಿಯಾದ ನೀರಿನ ವ್ಯವಸ್ಥೆಯಿಲ್ಲದೆ ಜನರು ದಿನನಿತ್ಯ ಪರದಾಟ ನಡೆಸುತ್ತಿದ್ದಾರೆ. ನೀರಿನ ಸಮಸ್ಯೆಗೆ ಮೇಲಿನಬೆಸಿಗೆ ಗ್ರಾಮ ಪಂಚಾಯತಿಯ ನಿರ್ಲಕ್ಷ್ಯವೇ ಕಾರಣವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತಿಗೆ ಆಗಾಗ ತಿಳಿಸುತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ. ನಮಗೆ ಬರಿ ಹಾರಿಕೆಯ ಉತ್ತರವನ್ನೇ ನೀಡುತ್ತಾ ಬಂದಿದ್ದಾರೆ. ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಇದ್ದರೂ ಸಹ ನಮ್ಮ ಸಾಲಗೇರಿ ಜನರ ಪಾಲಿಗೆ ಸತ್ತಂತಿದೆ. ರಸ್ತೆ ಕಾಮಗಾರಿ ಮತ್ತು ಜೆ.ಜೆ.ಎಂ ಕಾಮಗಾರಿಯ ಕಥೆಗಳನ್ನು ಹೇಳಿ ಜನರಿಗೆ ಕಾಗೆ ಹಾರಿಸಿದ್ದು, ಈಗಾಗಲೇ ನೀರಿಗೆ ಬರ ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರುಗಳು, ಪಿಡಿಒಗಳು ತಕ್ಷಣ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ವಿಪರೀತವಾಗುವುದರಲ್ಲಿ ಅನುಮಾನವಿಲ್ಲ. ತಕ್ಷಣ ನಮ್ಮ ಸಮಸ್ಯೆ ಬಗೆಹರಿಸಿ ಎಂದು ಆಗ್ರಹಿಸಿದರು.

ವಿದ್ಯುತ್ ಸಮಸ್ಯೆ ಬಗೆಹರಿಸಿ :
ಸಾಲಗೇರಿ ಗ್ರಾಮದಲ್ಲಿ ಸುಮಾರು 180 ಮನೆಗಳಿದ್ದು ಸುಮಾರು 25 ವರ್ಷಗಳ ಹಿಂದೆ ಕೇವಲ 25 ಮನೆಗಳಿಗೆ ವಿದ್ಯುತ್ ಸರಬರಾಜಿಗಾಗಿ ಒಂದು ಟಿ.ಸಿ ಅಳವಾಡಿಸಲಾಗಿದೆ‌. 25 ವರ್ಷಗಳ ಹಿಂದೆ ಹಾಕಿರುವ ಟ್ರಾನ್ಸ್‌ಫಾರ್ಮರ್ 25 ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲು ಸಾಕಾಗುತ್ತಿತ್ತು ಆದರೆ 25 ವರ್ಷಗಳ ಹಿಂದೆ ಇದ್ದ 25 ಮನೆಗಳು ಬದಲಾಗಿ ಈಗ ಸುಮಾರು 180 ಮನೆಗಳಿವೆ ಅದೇ ಟಿ.ಸಿಯಲ್ಲಿ 180 ಮನೆಗಳಿಗೂ ಒಂದೇ ಟಿ.ಸಿಯಲ್ಲಿ ವಿದ್ಯುತ್ ನೀಡುತ್ತಿರುವುದರಿಂದ ಮನೆಗಳಿಗೆ ಬೇಕಾಗುವಷ್ಟು ವಿದ್ಯುತ್ ದೊರೆಯುತ್ತಿಲ್ಲ. ವೋಲ್ಟೇಜ್ ಇಲ್ಲದ ಕಾರಣ ಕೆಲವು ಮೋಟಾರ್‌ಗಳು, ವಿದ್ಯುತ್ ಉಪಕರಣಗಳು ಸುಟ್ಟು ಹೋಗಿದೆ. ತಕ್ಷಣ ಹಳೇ ಟಿ.ಸಿಯನ್ನು ತೆಗೆದು 180 ಮನೆಗಳಿಗೆ ವಿದ್ಯುತ್ ಸೌಲಭ್ಯ ನೀಡುವ ಹೊಸ ಟಿ.ಸಿಯನ್ನು ಹಾಕಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಮೇಲಿನಬೇಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೀರು ವಿದ್ಯುತ್ ಸಮಸ್ಯೆ ಇರುವುದು ನಿಜ ಒಂದೇ ವಾರದಲ್ಲಿ ಸರ್ಕಾರದ ಸೌಲಭ್ಯವನ್ನು ಬಳಸಿಕೊಂಡು ಬೋರ್‌ವೇಲ್ ತೆಗೆದು ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಗೆ ನೀರಿನ ಸೌಲಭ್ಯ ನೀಡುತ್ತೇವೆ. ನನ್ನ ಬಗ್ಗೆ ಭರವಸೆ ಇಡಿ, ಎಷ್ಟೇ ಕಷ್ಟಕರವಾಗಿದ್ದರೂ ಬಗೆಹರಿಸುವ ಜವಾಬ್ದಾರಿ ನನ್ನದು ಹಾಗೂ ವಿದ್ಯುತ್ ತೊಂದರೆಯ ಬಗ್ಗೆ ನನ್ನ ಗಮನಕ್ಕೆ ನೀವು ತಂದಿರುವುದು ಸರಿ. ಒಂದೆರಡು ದಿನದಲ್ಲಿ ಕೆ.ಇ.ಬಿ ಇಂಜಿನಿಯರ್‌ರವರನ್ನು ಗ್ರಾಮ ಪಂಚಾಯತಿಗೆ ಕರೆಸಿ ಬೇರೆ ಟಿ.ಸಿ ಹಾಕಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್‌ ರೆಡ್ಡಿ ಭರವಸೆ ನೀಡಿದ ಮೇಲೆ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಟ್ಟರು.

ಈ ಪ್ರತಿಭಟನೆಯಲ್ಲಿ ಜಯನಗರ ಪ್ರಹ್ಲಾದ್, ಕೃಷ್ಣಮೂರ್ತಿ, ನಾಗೇಂದ್ರ, ಅವಿನಾಶ್, ಸಚಿನ್, ಚೇತನ ಶೆಟ್ಟಿ, ಹೈದರ್‌ಆಲಿ, ಶಾಂತಾ ಗಿರೀಶ್, ವಿಶಾಲಾಕ್ಷಿ, ಗಾಯಿತ್ರಿ, ರೇಖಾ, ಶಿವರಾಜ್, ಸುರೇಶ್, ಗಣೇಶ ಭಂಡಾರಿ, ಅಮೃತ ಮಂಜುನಾಥ್, ಮುಮ್ತಾಜ್, ರೆಯಲ್, ನಬೀಸಾ ಹಸನ್ ಇನ್ನೂ ಮುಂತಾದವರು ಇದ್ದರು.

Leave A Reply

Your email address will not be published.

error: Content is protected !!