ತೀರ್ಥಹಳ್ಳಿ: ಗಾಂಜಾ ಸೇವಿಸಿದ್ದ ಇಬ್ಬರ ಬಂಧನ !

0
4652

ತೀರ್ಥಹಳ್ಳಿ: ಮಾರಿಕಾಂಬ ದೇವಸ್ಥಾನದ ಎಡಭಾಗದ ಓಣಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಪ್ರಕರಣದಲ್ಲಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು ಇಬ್ಬರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

ಕುಶಾವತಿಯ ಅನುಜಿತ್ ಮತ್ತು ಬೆಟ್ಟಮಕ್ಕಿಯ ಸುಮಂತ್ ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ.

ತೀರ್ಥಹಳ್ಳಿ ಪೊಲೀಸರು ಗಸ್ತು ತಿರುಗುವಾಗ ಅನುಜಿತ್, ಸುಮಂತ್ ಮತ್ತು ಸೊಪ್ಪುಗುಡ್ಡೆಯ ಮಂಜುನಾಥ ಅನುಚಿತವಾಗಿ ವರ್ತಿಸುತ್ತಿದ್ದರು. ಮೂವರನ್ನು ವಶಕ್ಕೆ ಪಡೆದು ಮೆಗ್ಗಾನ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದು ಇಬ್ಬರದ್ದು ಪಾಸಿಟಿವ್ ರಿಪೋರ್ಟ್ ಬಂದಿದೆ.

ಈ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here