Home Crime News ತೀರ್ಥಹಳ್ಳಿ: ತಡರಾತ್ರಿ ಶ್ರೀ ರಾಮೇಶ್ವರ ದೇವಸ್ಥಾನದ ಬೀಗ ಒಡೆದು ಹುಂಡಿ ಕಳ್ಳತನಕ್ಕೆ ಯತ್ನ..!
ತೀರ್ಥಹಳ್ಳಿ: ಪಟ್ಟಣದ ಪುರಾತನ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದ ಮುಖ್ಯ ದ್ವಾರದ ಬೀಗವನ್ನು ಒಡೆದು ಕಳೆದ ರಾತ್ರಿ ಸುಮಾರು 12.30ಕ್ಕೆ ಕಳ್ಳತನಕ್ಕೆ ಯತ್ನಿಸಿದ ವಿಷಯ ತಿಳಿದು ಬಂದಿರುತ್ತದೆ.
ದೇವಸ್ಥಾನದ ಒಳಗೆ ಇರುವ ಹಣದ ಹುಂಡಿಯನ್ನು ತೆಗೆದುಕೊಂಡು ದೇವಸ್ಥಾನದ ಹಿಂಭಾಗದಲ್ಲಿ ಒಡೆಯಲು ಪ್ರಯತ್ನಿಸುತ್ತಿರುವ ಶಬ್ದ ಕೇಳಿಸಿಕೊಂಡ ಅಕ್ಕಪಕ್ಕದ ಜನರು ಬಂದು ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದಾಗ ಇಬ್ಬರು ಪರಾರಿಯಾಗಿರುತ್ತಾರೆ.
ತಕ್ಷಣ ತೀರ್ಥಹಳ್ಳಿ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿ ಕಟ್ಟೆ ಮಂಜುನಾಥ್ ರವರು ಬಂದು ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Related