ತೀರ್ಥಹಳ್ಳಿ-ಬೆಳ್ಳೂರು-ಸಾಗರಕ್ಕೆ ನಾಲ್ಕೈದು ದಿನದಲ್ಲಿ KSRTC ಬಸ್ ಸೌಲಭ್ಯ ; ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಭರವಸೆ

0
757

ರಿಪ್ಪನ್‌ಪೇಟೆ: ತೀರ್ಥಹಳ್ಳಿ-ಸಾಗರ ಮತ್ತು ಬೆಳ್ಳೂರು ರಿಪ್ಪನ್‌ಪೇಟೆ ಮಾರ್ಗದ ಪ್ರಯಾಣಿಕರ ಮತ್ತು ವಿದ್ಯಾರ್ಥಿಗಳ ಬಹು ವರ್ಷಗಳ ಬೇಡಿಕೆಯನ್ನಾದರಿಸಿ ರಾಜ್ಯ ಸಾರಿಗೆ ಸಚಿವ ಶ್ರೀರಾಮುಲು ಮತ್ತು ಕ್ಷೇತ್ರ ಶಾಸಕ ಹರತಾಳು ಹಾಲಪ್ಪರೊಂದಿಗೆ ಚರ್ಚಿಸಿ ಮೂರ್ನಾಲ್ಕು ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸುವುದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಭರವಸೆ ನೀಡಿದರು.

ಗವಟೂರು ರಾಮೇಶ್ವರ ದೇವಸ್ಥಾನದ ಅವರಣದಲ್ಲಿ ಆಯೋಜಿಸಲಾದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಮಲೆನಾಡಿನ ಕುಗ್ರಾಮವಾಗಿರುವ ಬೆಳ್ಳೂರು, ಬುಕ್ಕಿವರೆ, ದೋಬೈಲು, ಮಸ್ಕಾನಿ, ಹಿರೇಸಾನಿ, ಕಳಸೆ, ಹಾರೋಹಿತ್ತಲು, ಗುಬ್ಬಿಗಾ, ಬಸವಾಪುರ ಇನ್ನಿತರ ಮಜರೆ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜ್, ಪದವಿ ಕಾಲೇಜ್ ಹಾಗೂ ಐಟಿಐ ವ್ಯಾಸಂಗಕ್ಕೆ ನಿತ್ಯ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ರಿಪ್ಪನ್‌ಪೇಟೆ, ತೀರ್ಥಹಳ್ಳಿ, ಶಿವಮೊಗ್ಗ, ಹೊಸನಗರ, ಸಾಗರಕ್ಕೆ ಓಡಾಡುವ ವಿದ್ಯಾರ್ಥಿಗಳಿಗೆ ಬಸ್‌ಸೌಲಭ್ಯಗಳು ಇಲ್ಲದೆ ಹರಸಾಹಸ ಮಾಡಿಕೊಂಡು ಬರಬೇಕಾಗಿದೆ ಈ ಬಗ್ಗೆ ಇತ್ತೀಚೆಗೆ ಬೆಳ್ಳೂರು ಗ್ರಾಮದಲ್ಲಿ ನಡೆದ ‘ಜಿಲ್ಲಾಧಿಕಾರಿ ನಡಿಗೆ ಹಳ್ಳಿಕಡೆಗೆ’ ಕಾರ್ಯಕ್ರಮದ ಸಂದರ್ಭದಲ್ಲಿ ಸಾಕಷ್ಟು ಮನವಿಗಳನ್ನು ನೀಡಲಾಗಿದ್ದು ಹಾಗೂ ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರಿಗೆ ಹಾಲಿ ಶಾಸಕ ಹರತಾಳು ಹಾಲಪ್ಪನವರಿಗೂ ಮನವಿ ಸಲ್ಲಿಸಲಾಗಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಾರ್ಯಕರ್ತರು ರೈತನಾಗರೀಕರು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಈ ಬಗ್ಗೆ ನಾನು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪನವರೊಂದಿಗೆ ಮತ್ತು ರಾಜ್ಯ ಸಾರಿಗೆ ಸಚಿವ ಶ್ರೀರಾಮುಲುರೊಂದಿಗೆ ಸಮಾಲೋಚನೆ ನಡೆಸಿ ಮೂರು ನಾಲ್ಕೈದು ದಿನಗಳಲ್ಲಿ ಈ ಭಾಗದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.

ತಾಲ್ಲೂಕ್ ಕಛೇರಿಗೆ ಅಲೆದಾಟ ಆಕ್ರೋಶ:

ಹೊಸನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸಾಕಷ್ಟು ರೈತರ ಆರ್.ಟಿ.ಸಿ.ಯಲ್ಲಿ ಹೆಸರು ಬೆಳೆ ಕಾಲಂಗಳಲ್ಲಿ ಲೋಪದೋಷಗಳು ಕಾಣುತ್ತಿದ್ದು ತಿದ್ದುಪಡಿಗಾಗಿ ರೈತರು ಅರ್ಜಿ ಸಲ್ಲಿಸಿದರು ಕೂಡಾ ತಾಲ್ಲೂಕ್ ಕಛೇರಿಯ ಸಿಬ್ಬಂದಿವರ್ಗ ಅಲೆದಾಡಿಸುತ್ತಿದ್ದಾರೆ ವಯೋವೃದ್ದ ಕ್ಯಾನ್ಸರ್ ಪೀಡಿತ ತನ್ನ ಆರ್.ಟಿ.ಸಿ.ಹೆಸರು ಕಾಲಂನಲ್ಲಿ ಹೆಸರು ತಪ್ಪಾಗಿರುವ ಮತ್ತು ಬೆಳೆ ಕಾಲಂ ನಲ್ಲಿ ಬೆಳೆ ನೋಂದಣಿಯಾಗಿರದಿರುವ ಬಗ್ಗೆ ತಿದ್ದುಪಡಿಗಾಗಿ ಡಿಸೆಂಬರ್, ಜನವರಿಯಲ್ಲಿ ಅರ್ಜಿ ಸಲ್ಲಿಸಲಾದರೂ ಕೂಡಾ ಕಛೇರಿಯ ಸಿಬ್ಬಂದಿ ನಿತ್ಯ ಅಲೆಯುವಂತೆ ಮಾಡಿದ್ದಾರೆ ನಾಳೆ ಬಾ ಎಂದು ಹೇಳಿ ಕಳುಹಿಸುವುದು ಇದರಿಂದಾಗಿ ಸಾಕಷ್ಟು ತಾಲ್ಲೂಕಿನ ದೂರದೂರುಗಳ ರೈತರು ನಿತ್ಯ ತಾಲ್ಲೂಕ್ ಕಛೇರಿಗೆ ಓಡಾಡುವಂತಾಗಿದೆ ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ರೈತರು ಜಿಲ್ಲಾಧ್ಯಕ್ಷರ ಬಳಿ ತಮ್ಮ ಅಹವಾಲು ಹೇಳಿಕೊಂಡರು.

ಈ ಸಂದರ್ಭದಲ್ಲಿ ತಾಲ್ಲೂಕ್ ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡು, ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ನಾಗಾರ್ಜುನಸ್ವಾಮಿ, ನೆವಟೂರು ದೇವೇಂದ್ರಪ್ಪಗೌಡ, ಗ್ರಾ.ಪಂ.ಸದಸ್ಯ ಜಿ.ಡಿ.ಮಲ್ಲಿಕಾರ್ಜುನ, ಜಿ.ಎಂ.ದುಂಡರಾಜ್‌ಗೌಡ, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಬಿಜೆಪಿ ಮುಖಂಡರಾದ ಬಿ.ಯುವರಾಜ್, ಎನ್.ಆರ್.ದೇವಾನಂದ, ಗೀರೀಶ್‌ ಜಂಬಳ್ಳಿ, ತರಕಾರಿ ಯೋಗೇಂದ್ರಗೌಡ, ಕೆ.ಬಿ.ಹೂವಪ್ಪ, ಬೂತ್‌ಅಧ್ಯಕ್ಷ ವಾಸುಶೆಟ್ಟಿ, ಜಿ.ಎಲ್.ಸೋಮಶೇಖರಗೌಡ ಇನ್ನಿತರ ಹಲವರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here