20.6 C
Shimoga
Friday, December 9, 2022

ತೀರ್ಥಹಳ್ಳಿ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ “ಓಡಾಡೋ ಗೊಂಬೆ” ಆಲ್ಬಂ ಸಾಂಗ್ ಬಿಡುಗಡೆ

ತೀರ್ಥಹಳ್ಳಿ: ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ಕನ್ನಡದ ಪ್ರಸಿದ್ಧ ನಿರ್ದೇಶಕರು, ತಂತ್ರಜ್ಞರು ಸೇರಿ ಮಾಡಿರುವ “ಓಡಾಡೋ ಗೊಂಬೆ” ಆಲ್ಬಂ ಸಾಂಗ್ ನವೆಂಬರ್ 25ರಂದು 5 ಗಂಟೆಗೆ ಬಿಡುಗಡೆಗೊಂಡಿದೆ.


ಕನ್ನಡದ ಆಲ್ಬಂ ಸಾಂಗ್ ಕ್ಷೇತ್ರದಲ್ಲಿ ಈ ಸಾಂಗ್ ಹೊಸ ಮೈಲುಗಲ್ಲು ಸೃಷ್ಟಿ ಮಾಡಿದ್ದು ಈಗಾಗಲೇ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬಿಡುಗಡೆಗೊಳ್ಳುತ್ತಲೇ ಸಾವಿರಾರು ಜನರ ಮೆಚ್ಚುಗೆ ವ್ಯಕ್ತವಾಗಿದೆ.


ಹೊಸ ಪ್ರೊಡಕ್ಷನ್ ನಿರ್ಮಾಣ:

ಹೊಸ ಪ್ರೊಡಕ್ಷನ್ ಫ್ಲೈ ಆನ್ ಬ್ರದರ್ಸ್ ಈ ಆಲ್ಬಂ ಸಾಂಗ್ ನಿರ್ಮಾಣ ಮಾಡಿದೆ. ಜೆಆರ್ ಎಂ ಕಾನ್ಸೆಪ್ಟ್ ಟೀಮ್ ಕಲ್ಪನೆಯೊಂದಿಗೆ ಅಮೃತಾಂಜನ್, ಸಡನ್ ಆಗಿ ಬತ್ತಿ ಇಟ್ಟ ಶಾರ್ಟ್ ಮೂವಿ ನಿರ್ದೇಶನ ಖ್ಯಾತಿಯ ಜ್ಯೋತಿರಾವ್ ಮೋಹಿತ್ ಈ ಆಲ್ಬಂ ಸಾಂಗ್ ನಿರ್ದೇಶಕರಾಗಿದ್ದಾರೆ.


ತೀರ್ಥಹಳ್ಳಿ ಮೂಲದ ದಿಯನ್ ರಾಜ್ ಎಂಟ್ರಿ:

ತೀರ್ಥಹಳ್ಳಿ ಮೂಲದ ದಿಯನ್ ರಾಜ್ ಹಾಗೂ ಪಾಯಲ್ ಚಂಗಪ್ಪ ನಟಿಸಿರುವ ಓಡಾಡೋ ಗೊಂಬೆ ಆಲ್ಬಮ್ ಸಾಂಗ್ ಎಸ್ ಯೂನಿಟ್ ರೆಕಾರ್ಡ್ (s-unit records) ಯೂಟ್ಯೂಬ್ ಚಾನೆಲಿನಲ್ಲಿ ಬಿಡುಗಡೆಯಾಗಿದೆ.


ಜೀ ಕನ್ನಡ ಸರಿಗಮಪ, ಇಂಡಿಯನ್ ಐಡಾಲ್ ಖ್ಯಾತಿಯ ಗಾಯಕ ನಿಹಾಲ್ ತಾರೋ, ಇಶಾ ಸುಚಿ ಹಾಡಿದ್ದಾರೆ. ಕಾಂತಾರಾ ಸಿನಿಮಾದ ಸಿಂಗಾರ ಸಿರಿಯೇ ಖ್ಯಾತಿಯ ಪ್ರಮೋದ್ ಮರವಂತೆ ಈ ಆಲ್ಬಂ ಸಾಂಗ್ ರಚಿಸಿದ್ದಾರೆ.
ಓಡಾಡೋ ಗೊಂಬೆ ಆಲ್ಬಂ ಸಾಂಗ್ ನಲ್ಲಿ ಮಧುಮತಿ, ರಿಷಿಕ ಗೌಡ, ಪ್ರತಿಕ್ ಶೆಟ್ಟಿ ನಟಿಸಿದ್ದಾರೆ. ಕಿರಣ್ ಕುಮಾರ್ ಎಡಿಟಿಂಗ್ ಮಾಡಿದ್ದಾರೆ. ರತ್ವಿಕ್ ಮುರಳಿದರ್ ಸಂಗೀತ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ರಮಣೀಯ ಪರಿಸರಗಳ ನಡುವೆ ಹಾಗೂ ಪ್ರಕೃತಿಯ ತಾಣಗಳಲ್ಲಿ ಶೂಟಿಂಗ್ ನಡೆದಿದ್ದು ಆಲ್ಬಂ ಸಾಂಗ್ ಕನ್ನಡದ ಟಾಪ್ ಆಲ್ಬಂ ಸಾಂಗ್ ಆಗುವ ನಿರೀಕ್ಷೆ ಮೂಡಿಸಿದೆ.


ಛಾಯಾಗ್ರಹಣ ಸುಮಂತ್ ಆಚಾರ್ಯ, ನೃತ್ಯ ಸಂಯೋಜನೆ ಪ್ರತೀಕ್ ಶೆಟ್ಟಿ ಮಾಡಿದ್ದಾರೆ.
ಡಿ.ಡಿ ಕೂಲ್ ಮಗಾ ಸ್ಟುಡಿಯೋಸ್, ಈಎಫ್ ಎಕ್ಸ್ ಮತ್ತು ಅಂತಿಮ ಮಿಶ್ರಣ : ಪಿ ಎಸ್ ವೆಂಕಟ್ & ಪವನ್ ಜಿ.ಎನ್, ನಿರ್ದೇಶನ ತಂಡ: ಮಹೇಂದ್ರ ಪಿಎನ್, ವೆಂಕಟ್, ಪವನ್, ನಿರ್ಮಾಣ: ಮಹೇಂದ್ರ ಪಿ.ಎನ್, ಸ್ಟಿಲ್ಸ್: ಸುರೇಶ್, ಮೇಕಪ್ : ಕುಮಾರ ಕೇಶವಿನ್ಯಾಸ ಅಸೋಸಿಯೇಷನ್
ಡ್ರೋನ್: ವಿಕಾಸ್ ಕಾರ್ಬರ್, ಲಿರಿಕಲ್ ವಿಡಿಯೋ: ಸೀನು ಗೌಡ, ಶೀರ್ಷಿಕೆ ಸ್ಕೆಚ್: ಓಂ ಗಿರೀಶ್
ಕಲಾ ನಿರ್ದೇಶನ: ಯೋಗಿ ನೂತನ್ ಅಂಬರೀಶ್ ಮಾಡಿದ್ದಾರೆ.
ಎಲ್ಲರೂ (s-unit records) ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಆಲ್ಬಂ ಸಾಂಗ್ ವೀಕ್ಷಿಸಿ ಬೆಂಬಲಿಸಲು ಕಲಾತಂಡ ಮನವಿ ಮಾಡಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!