23.2 C
Shimoga
Sunday, November 27, 2022

ತೆರಿಗೆ ಪಾವತಿ ಮಾಡದೆ ಓಡಿಸುತ್ತಿದ್ದ ಖಾಸಗಿ ಬಸ್ ಮುಟ್ಟುಗೋಲು !

ಸಾಗರ : ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಿಢೀರ್ ದಾಳಿ ನಡೆಸಿ ಕಳೆದ ಒಂದು ವರ್ಷದಿಂದ ತೆರಿಗೆ ಪಾವತಿ ಮಾಡದೆ ಓಡಾಡಿಸುತ್ತಿದ್ದ ಖಾಸಗಿ ಬಸ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಕಳೆದ ಒಂದು ವರ್ಷದಿಂದ ಸುಮಾರು 4.50 ಲಕ್ಷ ರೂ. ತೆರಿಗೆ ಪಾವತಿ ಮಾಡದೆ ಇರುವುದು ಅಧಿಕಾರಿಗಳು ತಪಾಸಣೆ ವೇಳೆ ಪತ್ತೆಹಚ್ಚಿ ಬಸ್ ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಗಾಯತ್ರಿ ದೇವಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಕೇಶ್, ಹಿರಿಯ ಮೋಟಾರ್ ವಾಹನ ನಿರೀಕ್ಷಕ ವಾಸುದೇವ್, ಸಿಬ್ಬಂದಿ ಉಮೇಶ್,ಮಣಿ, ಚಾಲಕ ಪಂಚಾಕ್ಷರಿ ಪಾಲ್ಗೊಂಡಿದ್ದರು. 

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!