ಹೊಸನಗರ: ಅಡಿಕೆಯಲ್ಲಿ ಎಲೆಚುಕ್ಕೆ ರೋಗದ ನಿರ್ವಹಣೆಗೆ ಶಿಲೀಂಧ್ರ ನಾಶಕ ಖರೀದಿಸಿದ ರೈತರಿಗೆ ಶೇ.75 ಸಹಾಯಧನ ಲಭ್ಯ

0
1280

ಹೊಸನಗರ: ಅಡಿಕೆಯಲ್ಲಿ ಎಲೆಚುಕ್ಕೆ ರೋಗದ ನಿರ್ವಹಣೆಗೆ ಶಿಲೀಂಧ್ರ ನಾಶಕ ಖರೀದಿಸಿದ ತಾಲೂಕಿನ ರೈತರಿಗೆ ಹೊಸನಗರ ತೋಟಗಾರಿಕಾ ಇಲಾಖೆಯಲ್ಲಿ ಶೇ.75ರ ಸಹಾಯಧನ ಲಭ್ಯವಿದ್ದು, ಆಸಕ್ತ ರೈತರು ಇದರ ಸದುಪಯೋಗ ಪಡೆಯಲು ಇಲ್ಲಿನ ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಪುಟ್ಟನಾಯ್ಕ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

• ಪ್ರತಿ ಎಕರೆಗೆ 2000 ರೂ. ಮೊತ್ತದ GST ಬಿಲ್ ಸಲ್ಲಿಸಬೇಕು.

• 2021ರ ಏಪ್ರಿಲ್ ನಂತರದ ಪಹಣಿ.

• ಆಧಾರ್ ಕಾರ್ಡ್ ನಕಲು ಪ್ರತಿ.

• ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ.

• ಜಂಟಿ ಖಾತೆ ಇದ್ದಲ್ಲಿ 20 ರೂ. ಛಾಪ ಕಾಗದದಲ್ಲಿ ಒಪ್ಪಿಗೆ ಪತ್ರ ಸಲ್ಲಿಸಬೇಕು.

• ಪಹಣಿದಾರರು ಪೌತಿಯಾಗಿದಲ್ಲಿ ವಂಶವೃಕ್ಷ, ಮರಣ ಪ್ರಮಾಣ ಪತ್ರ ಮತ್ತು ಒಪ್ಪಿಗೆ ಪತ್ರ ಸಲ್ಲಿಸಬೇಕು.

• ಪ್ರತಿ ಫಲಾನುಭವಿಗೆ ಗರಿಷ್ಠ 5 ಎಕರೆಯವರೆಗೂ ಸಹಾಯಧನ ಲಭ್ಯ.

• ಸಾಮಾನ್ಯ ರೈತರಿಗೆ ಪ್ರತಿ ಎಕರೆಗೆ ಶೇ. 75ರ ಸಹಾಯಧನ 1455 ರೂ. ನೀಡಲಾಗುತ್ತದೆ.

• ರೈತರು ಪಟ್ಟಿಯಲ್ಲಿರುವ 10 ಶಿಲೀಂದ್ರ ನಾಶಕಗಳಲ್ಲಿ (ಮ್ಯಾಂಕೋಜೆಬ್, ಮೆಟಲಾಕ್ಸಿಲ್, ಹೆಕ್ಸಕೊನಜೋಲ್, ಪ್ರೊಪಿಕೊನಜೋಲ್, ಟಿಬಕೊನಜೋಲ್ ಇತ್ಯಾದಿ…) ಖರೀದಿ ಮಾಡಿರಬೇಕು.

ಹೆಚ್ಚಿನ ಮಾಹಿತಿಗಾಗಿ ಹೊಸನಗರ ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಪುಟ್ಟನಾಯ್ಕ ರವರ ಮೊಬೈಲ್ ಸಂಖ್ಯೆ 9591695327 ಸಂಪರ್ಕಿಸಿ.

ಜಾಹಿರಾತು

LEAVE A REPLY

Please enter your comment!
Please enter your name here