23.2 C
Shimoga
Sunday, November 27, 2022

ತ್ರಿಣಿವೆ ಗ್ರಾಪಂ ಅಕ್ರಮ ಕ್ರಿಯಾ ಯೋಜನೆ ಆರೋಪ ; ಸ್ಥಗಿತಗೊಳಿಸಲು ಮನವಿ


ಹೊಸನಗರ: ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿಯಲ್ಲಿ ಎಂ.ಜಿ.ಎನ್.ಆರ್.ಇ.ಜಿ.ಎಯಲ್ಲಿ ಕ್ರಿಯಾ ಯೋಜನೆ ತಯಾರಿಸಲಾಗಿದ್ದು ಈ ಕ್ರಿಯಾ ಯೋಜನೆ ಅಕ್ರಮದಿಂದ ಕೂಡಿದೆ ಎಂದು ತ್ರಿಣಿವೆ ಗ್ರಾಮ ಪಂಚಾಯಿತಿ ಪಿಡಿಓ ರಂಜಿತರವರಿಗೆ, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ಒಂಬಡ್ಸ್ಮನ್ ಎಂ.ಜಿ.ಎನ್.ಆರ್.ಇ.ಜಿ.ಎ ಜಿಲ್ಲಾ ಪಂಚಾಯಿತಿ ಶಿವಮೊಗ್ಗ ಪಂಚಾಯಿತಿಗೆ ಮನವಿ ಪತ್ರ ಸಲ್ಲಿಸಿ ಹಿಂದೆ ತಯಾರಿಸಲಾದ ಕ್ರಿಯಾ ಯೋಜನೆಯನ್ನು ರದ್ದುಪಡಿಸಬೇಕೆಂದು ಅಲ್ಲಿನ ಗ್ರಾಮಸ್ಥರಾದ ಎನ್ ಪ್ರಕಾಶ್‌ಶೆಟ್ಟಿ ಮತ್ತು ನರೇಂದ್ರಕುಮಾರ್‌ರವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು.


ಮನವಿ ಪತ್ರದಲ್ಲಿ ತ್ರಿಣಿವೆ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಯಲ್ಲಿ ಕಾಮಗಾರಿಗಳಿಗೆ 2022-23ನೇ ಸಾಲಿನಲ್ಲಿ ಕ್ರೀಯಾ ತಯಾರಿಸಿದ್ದು ಈ ಕ್ರಿಯಾ ಯೋಜನೆಯು ಅಕ್ರಮವಾಗಿ ತಯಾರಿಸಿದ್ದಾರೆ ಈ ಕ್ರಿಯಾ ಯೋಜನೆಯನ್ನು ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಯ ನಿಯಮಾನುಸಾರ ಫಲಾನುಭವಿಗಳನ್ನು ಗ್ರಾಮ ಸಭೆಯ ದಿನಾಂಕ: 24-12-2021ರಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಮಾಡಿರುವುದಿಲ್ಲ ಹಾಗೂ ಈ ಭಾಗದ ಗ್ರಾಮಸ್ಥರಿಗೆ ಕ್ರಿಯಾ ಯೋಜನೆಗಳ ಬಗ್ಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ ಹಾಗೂ ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳ ಬಗ್ಗೆ ಚರ್ಚೆಯಾಗಿಲ್ಲ. ಈ ಕ್ರಿಯಾ ಯೋಜನೆಯಲ್ಲಿ ಆಯ್ಕೆ ಮಾಡಿರುವುದು ಕೇವಲ ರಾಜಕೀಯ ಪ್ರೇರಿತವಾಗಿದ್ದು ಈ ಕ್ರಿಯಾ ಯೋಜನೆಯಲ್ಲಿರುವ ಫಲಾನುಭವಿಗಳು ಗ್ರಾಮ ಪಂಚಾಯಿತ್ ಸದಸ್ಯರಿಗೆ ಹಾಗೂ ಬೇಕಾದವರಿಗೆ ವಿನಃ ಎಲ್ಲ ವರ್ಗದ ಜನರಿಗೆ ಈಬಗ್ಗೆ ಮಾಹಿತಿ ನೀಡಿರುವ ಬಗ್ಗೆ ಯಾವುದೇ ದಾಖಲೆಗಳಿರುವುದಿಲ್ಲ.

ತ್ರಿಣಿವೆ ಗ್ರಾಮ ಪಂಚಾಯಿತ್‌ನಲ್ಲಿ ಯಾವುದೇ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಗ್ರಾಮ ಸಭೆಗಳಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳ ಬಗ್ಗೆ ತೀರ್ಮಾನಿಸಿರುವುದಿಲ್ಲ ಆದ್ದರಿಂದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಬೇಕಾದವರನ್ನು ಆಯ್ಕೆ ಮಾಡುವ ಉದ್ದೇಶವೇ ಆಗಿರುತ್ತದೆ. ಈ ರೀತಿ ಸರ್ಕಾರದ ಆದೇಶವನ್ನು ಉಲ್ಲಂಘಸಿ ಮಾಡಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ಗ್ರಾಮಸ್ಥರ ಗಮನಕ್ಕೂ ತಾರದೇ ಕೇವಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಧ್ಯಕ್ಷ, ಉಪಾಧ್ಯಕ್ಷರ, ಸದಸ್ಯರ ಬೆಂಬಲಿಗರಿಗೆ ಬೇಕಾಗುವಂತಹ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಕ್ರಿಯಾ ಯೋಜನೆ ತಯಾರಿಸಲಾಗಿದ್ದು 2021-22ನೇ ಸಾಲಿನಲ್ಲಿ ತಯಾರಿಸಲಾದ ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಯ ಕ್ರಿಯಾ ಯೋಜನೆಯನ್ನು ರದ್ದುಪಡಿಸಬೇಕೆಂದು ಮನವಿ ಮಾಡಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!