ತ್ರಿಣಿವೆ ಗ್ರಾಪಂ ಆವರಣದಲ್ಲಿ ಕೋವಿಡ್-19 ಲಸಿಕೆ ವ್ಯವಸ್ಥೆ: ಅಭಿನಂದನೆ

0
495

ಹೊಸನಗರ: ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿ ಆಯುರ್ವೇದ ಆಸ್ಪತ್ರೆಯಿದ್ದು ಆದರೆ ಆಸ್ವತ್ರೆಯಲ್ಲಿ ನೆಟ್‌ವರ್ಕ್ ಸೇವೆ ಸರಿಯಿಲ್ಲದೇ ಎಲ್ಲಿಯು ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಲು ಸ್ಥಳವಿಲ್ಲದೇ ಆರೋಗ್ಯ ಇಲಾಖೆ ಪರದಾಟ ನಡೆಸುತ್ತಿದ್ದಾಗ ತ್ರಿಣಿವೆ ಗ್ರಾಮ ಪಂಚಾಯಿತಿಯ ಪಿಡಿಓ ರಂಜೀತ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಕೃಷ್ಣಮೂರ್ತಿ ಹಾಗೂ ಸದಸ್ಯರ ಸಹಕಾರದಿಂದ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಲು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಟ್ಟರು.

ಅಭಿನಂದನೆ:

ನಾವು ಹೊಸನಗರದ ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಲು ಸುಮಾರು 15 ಕಿ.ಮೀ. ಹೋಗಬೇಕಾಗಿತ್ತು. ಆದರೆ ನಮ್ಮ ತ್ರಿಣಿವೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮಸ್ಥರಿಗೆ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಲು ಸಹಕರಿಸಿದ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಅಧ್ಯಕ್ಷ, ಉಪಾದ್ಯಕ್ಷ ಮತ್ತು ಸದಸ್ಯರಿಗೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ತ್ರಿಣಿವೆ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here