23.2 C
Shimoga
Sunday, November 27, 2022

ತ್ರಿಣಿವೆ ಗ್ರಾಪಂ ನೂತನ ಅಧ್ಯಕ್ಷರಾಗಿ ತೊಗರೆ ಕೃಷ್ಣಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ಟಿ.ಡಿ.ಶ್ರೀನಿವಾಸ್ ಅವಿರೋಧ ಆಯ್ಕೆ


ಹೊಸನಗರ: ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯು ಗುರುವಾರ ಗ್ರಾಮ ಪಂಚಾಯಿತಿ ಆವರಣದಲ್ಲಿ ಚುನಾವಣಾಧಿಕಾರಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಟಿ.ಸಿ ಪುಟ್ಟನಾಯಕ್ ರವರ ನೇತೃತ್ವದಲ್ಲಿ ನಡೆದಿದ್ದು ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ತೊಗರೆ ಕೃಷ್ಣಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ಟಿ.ಡಿ ಶ್ರೀನಿವಾಸ್‌ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ತ್ರಿಣಿವೆ ಗ್ರಾಮ ಪಂಚಾಯಿತಿಯಲ್ಲಿ ಒಂದೂವರೆ ವರ್ಷಗಳ ಹಿಂದೆ ಅಧ್ಯಕ್ಷರ ಚುನಾವಣೆ ನಡೆಯುವ ಸಂದರ್ಭದಲ್ಲಿ ಒಪ್ಪಂದದ ಮೇರೆಗೆ ಚಂದ್ರಶೇಖರ್‌ ಅಧ್ಯಕ್ಷರಾಗಿ ಕೃಷ್ಣಮೂರ್ತಿಯವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಒಪ್ಪಂದದ ಮೇರೆಗೆಮಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ್ ಹಾಗೂ ಕೃಷ್ಣಮೂರ್ತಿಯವರು ರಾಜೀನಾಮೆ ನೀಡಿದ್ದು ತೆರವಾದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.


ಈ ದೇಶದ ಕಟ್ಟ ಕಡೆಯ ವ್ಯಕ್ತಿಗೆ ಇಂದು ಅಧಿಕಾರ ಸಿಕ್ಕಿದೆ:

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ದೇಶದ ಕಟ್ಟಕಡೆಯ ವ್ಯಕ್ತಿಯನ್ನು ಸಮಾನವಾಗಿ ಗೌರವಿಸಬೇಕು ಎಂಬಂತೆ ಇಂದು ಈ ದೇಶದ ಕಟ್ಟಕಡೆಯ ವ್ಯಕ್ತಿ ನಾನಗಿದ್ದು ನನಗೆ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರುಮಅಧಿಕಾರ ನೀಡಿದ್ದಾರೆ. ನಾನು ಕಡು ಬಡವನಾಗಿದ್ದು ಒಂದು ತುತ್ತು ಅನ್ನಕ್ಕೂ ಕಷ್ಟಕರವಾಗಿ ನಾನು ಈ ಹಿಂದೆ ಜೀವನ ಸಾಗಿಸುವವನಾಗಿದ್ದು ನನಗೆ ಇಲ್ಲಿನ ಜನತೆ ಅಧಿಕಾರದ ಪದವಿ ನೀಡಿದ್ದಾರೆ ನಾನು ಅವರ ಭರವಸೆಗಳನ್ನು ನನಗೆ ಸಿಕ್ಕ ಅವಧಿಯಲ್ಲಿ ಪೊರೈಸುವ ಹಾಗೇ ಸೇವೆ ಸಲ್ಲಿಸುತ್ತೇನೆ ಎಂಬ ಭರವಸೆಯನ್ನು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಈ ಸಂದರ್ಭದಲ್ಲಿ ಕೃಷ್ಣಮೂರ್ತಿಯವರು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಮೌಳಿ ಗೌಡ, ಗ್ರಾಮದ ಹಿರಿಯರಾದ ಬಸಪ್ಪಗೌಡ, ಸಾಹಿತಿ ಗಣೇಶ್ ಮೂರ್ತಿ, ಗಣೇಶ್ ಬಾಳೆಕೊಪ್ಪ, ಕಾಯಿ ನಾಗೇಶ್, ಶ್ರೀನಿವಾಸ್, ವಾಲೆಮನೆ ನಾಗೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಿ ರಂಜಿತಾ, ಸುಧಾಕರ್, ಸ್ವಾಮಿ, ರಾಘವೇಂದ್ರ ನವೀನ್, ಸೀತಮ್ಮ, ಉಬೆದುಲ್ಲ ಇನ್ನೂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!