ದತ್ತಪೀಠ ಮಾರ್ಗದಲ್ಲಿ ಭಾರಿ ವಾಹನ ಸಂಚಾರ ನಿಷೇಧಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

0
213

ಚಿಕ್ಕಮಗಳೂರು: ತಾಲ್ಲೂಕಿನ ದತ್ತಪೀಠ ಮಾರ್ಗದ ಕವಿಕಲ್‍ಗಂಡಿ ಹಾಗೂ ಅತ್ತಿಗುಂಡಿ ಸಮೀಪದ ರಸ್ತೆಗಳಲ್ಲಿ ಮರವನ್ನು ಹೊತ್ತು ಒಯ್ಯುವ ಲಾರಿಗಳ ಸಂಚಾರದಿಂದ ರಸ್ತೆ ಕುಸಿತಗೊಳ್ಳುತ್ತಿದ್ದು ಕೂಡಲೇ ಹೆಚ್ಚು ಭಾರವನ್ನು ಹೊತ್ತೊಯ್ಯುವ ವಾಹನ ಸಂಚಾರವನ್ನು ನಿಷೇಧಿಸುವಂತೆ ಮುಳ್ಳಯ್ಯನಗಿರಿ ತಪ್ಪಲು ರಕ್ಷಣಾ ವೇದಿಕೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಕೆ.ಎಸ್. ಗುರುವೇಶ್, ಹೆಚ್ಚು ಭಾರವನ್ನು ಹೊತ್ತು ಅನೇಕ ಲಾರಿಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ.

ಇದರಿಂದಾಗಿ ರಸ್ತೆ ಹೆಚ್ಚಾಗಿ ಕುಸಿತಗೊಂಡರೆ ಸಂಚಾರವೇ ಸ್ಥಗಿತ ಸಂಭವವಿದೆ, ಅತ್ತಿಗುಂಡಿ, ಸಂಪಿಗೆಕಟ್ಟೆ ಹಾಗೂ ಮಹಲುಗಳಿಂದ ಅನೇಕ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಆರೋಗ್ಯ, ಅರಣ್ಯ ಸಿಬ್ಬಂದಿಯವರು ಪ್ರತಿನಿತ್ಯ ಸಂಚರಿಸುತ್ತಿರುತ್ತಾರೆ. ಈ ರಸ್ತೆ ಸ್ಥಗಿತಗೊಂಡರೆ ಸ್ಥಳೀಯ ನಿವಾಸಿಗಳು ಸುಮಾರು 50 ಕಿ. ಮೀ. ಹೆಚ್ಚು ಸುತ್ತಿಕೊಂಡು ನಗರಕ್ಕೆ ಬರಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಹೇಳಿದರು.

ಆದ್ದರಿಂದ ಈ ಮಾರ್ಗದಲ್ಲಿ ಕಡಿಮೆ ಭಾರವನ್ನು ಹೊತ್ತೊಯ್ಯುವ ವಾಹನಗಳಿಗೆ ಸಂಚರಿಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here