ದತ್ತಾಜಯಂತಿ ಪ್ರಯುಕ್ತ ನಡೆದ ಶೋಭಾಯಾತ್ರೆಗೆ ಭಾರೀ ಜನ ಸಾಗರ !!

0
489

ಚಿಕ್ಕಮಗಳೂರು : ಭಾನುವಾರ ನಡೆಯಲ್ಲಿರುವ ದತ್ತಜಯಂತಿ ಪ್ರಯುಕ್ತ ಇಂದು ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ನಡೆಸಲಾಯಿತು.

ಕಾಮಧೇನು ಗಣಪತಿ ದೇವಾಲಯದ ಆರಂಭಗೊಂಡ ಶೋಭಾಯಾತ್ರೆ ಅನೇಕ ಕಲಾ ತಂಡ ದತ್ತ ವಿಗ್ರಹದೊಂದಿಗೆ ಸಾಗಿದ ಮೆರವಣಿಗೆ ಭಾರೀ ಪ್ರಮಾಣದ ಜನರು ಸೇರಿದ್ದು ವಿಶೇಷವಾಗಿತ್ತು.

ದತ್ತ ಭಜನೆ, ಹನುಮಾನ್ ಭಜನೆ, ಶ್ರೀ ರಾಮಮಂತ್ರ ಪಠಣ, ಡಿ.ಜೆ ಗಾಯನ ಸೇರಿದಂತೆ ಹಿಂದುಪರ ಜಯ ಘೋಷಗಳು ಮೊಳಗಿದ್ದವು.‌ ನೃತ್ಯ ನರ್ತಕ ಕಲಾತಂಡಗಳು ವೇಷಧಾರಿ ಮಕ್ಕಳು ಗಮನ ಸೆಳೆದರು. ಡಿ.ಜೆ ಹಾಡುಗಳ ಅಬ್ಬರಕ್ಕೆ ಯುವಕರು ಕುಣಿದು ಕುಪ್ಪಳಿಸಿದ್ದು, ಎಲ್ಲೆಲ್ಲೂ ಕೇಸರಿ ಧ್ವಜಗಳು ಹಾರಾಡಿದವು. ಅನೇಕ ಕಲಾ ತಂಡಗಳೊಂದಿಗೆ ಸಾಗುತ್ತಿದ್ದ ಮೆರವಣಿಗೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ಜನ ನಿಂತು ವೀಕ್ಷಿಸಿದರು.

ಜಿಲ್ಲೆಯ ಜನಪ್ರತಿನಿಧಿಗಳು, ವಿಶ್ವಹಿಂದು ಪರಿಷತ್, ಭಜರಂಗದಳದ ಮುಖಂಡರು ಪಾಲ್ಗೊಂಡಿದ್ದರು.‌ ಸೂಕ್ಷ್ಮ ಸ್ಥಳಗಳಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬೆಳಗಿನಿಂದಲೇ ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆ ಸಂಚಾರವನ್ನು ನಿಷೇಧಿಸಲಾಗಿದ್ದು ಜನ ಕಿರಿಕಿರಿ ಅನುಭವಿಸಬೇಕಾಯಿತು. ಅಜಾದ್ ಮೈದಾನದಲ್ಲಿ ಧಾರ್ಮಿಕ ಸಭೆ ಹಮ್ಮಿಕೊಳ್ಳುವ ಮೂಲಕ ಶೋಭಾಯಾತ್ರೆಗೆ ತೆರೆ ಎಳೆಯಲಾಯಿತು.

ನಾಳೆ ಬೆಳಿಗ್ಗೆ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ದತ್ತಮಾಲಾಧಾರಿಗಳು ತೆರಳಿ ದತ್ತಪಾದುಕೆ ದರ್ಶನ ಪಡೆದು, ಪಡಿ ಸಮರ್ಪಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ದತ್ತಮಾಲೆ ವಿಸರ್ಜಿಸಲ್ಲಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here