ದತ್ತ ಪೀಠದದ ಹೋಮ ನಡೆಯುವ ಸ್ಥಳದಲ್ಲಿ ಮಾಂಸಹಾರ ಸೇವನೆ: ಶ್ರೀರಾಮ ಸೇನೆಯಿಂದ ಗೋಮೂತ್ರ ಶುದ್ದೀಕರಣ

0
177

ಚಿಕ್ಕಮಗಳೂರು : ಹಿಂದೂ ಮುಸ್ಲಿಮರ ವಿವಾದಿತ ಕೇಂದ್ರ ಬಿಂದು ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ಪೀಠದಲ್ಲಿ ಕೋರ್ಟ್ ಆದೇಶವನ್ನು ಗಾಳಿಗೆ ತೂರಿ ಮಾಂಸ ಭಕ್ಷಣೆ ಮಾಡಿದ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ವಿವಾದಿತ ಜಾಗದಲ್ಲಿ ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಗೋರಿಗಳಿಗೆ ಪೂಜೆ ಪುನಸ್ಕಾರ ಸೇರಿದಂತೆ ಬಿರಿಯಾನಿ ಭಕ್ಷಣೆ ಮಾಡಿದ್ದ ಸ್ಥಳವನ್ನು ಶ್ರೀ ರಾಮ ಸೇನೆ ಕಾರ್ಯಕರ್ತರು ಗೋ ಮೂತ್ರದ ಮೂಲಕ ಶುದ್ದೀಕರಣ ಮಾಡಿದ್ದಾರೆ.

ವಿವಾದಿತ ಕೇಂದ್ರವಾಗಿರೋ ಇನಾಂ ದತ್ತಾತ್ರೇಯ ಪೀಠದಲ್ಲಿ ಮಾಂಸಹಾರ ಅಡುಗೆ ಮಾಡಿ ಪೀಠದಲ್ಲಿರೋ ಹೋಮ ಮಂಟಪದಲ್ಲಿ ಊಟ ಮಾಡ್ತಾ ಇರೋ ವಿಡಿಯೋ ಕೇಲ‌ ಹಿಂದೆ ವೈರಲ್ ಆಗಿತ್ತು.

ವಿಡಿಯೋ ವೈರಲ್ ಆಗುತ್ತಿದಂತೆ ಹಿಂದೂ ಪರಸಂಘಟನೆಗಳು ಅಕ್ರೋಶ ವ್ಯಕ್ತಪಡಿಸಿ ದತ್ತಪೀಠದಲ್ಲಿಯೇ ಪ್ರತಿಭಟನೆ ನಡೆಸಿದ್ದರು.

ಮಾಂಸಹಾರ ಊಟಕ್ಕೆ ಅವಕಾಶ ನೀಡಿದ್ದಾರೆ ಅಂತಾ ಮುಜಾರಾಯಿ ಇಲಾಖೆಯ ವಿರುದ್ದವೇ ಹರಿಹಾಯ್ದು ಪ್ರತಿಭಟನೆ ನಡೆಸಿದ್ದರು.

ಹೋಮ-ಹವನ ನಡೆಯುವ ಸ್ಥಳದಲ್ಲಿ, ಮಾಂಸಹಾರ ಸೇವಿಸಿದರೆ ಎಂದು ವಿವಾದಕ್ಕೆ ಮುಖ್ಯ ಕಾರಣವಾಯಿತು.

ಪೀಠದ ಆವರಣ, ತಾತ್ಕಾಲಿಕ ಶೆಡ್ ನಲ್ಲಿ ಮಾಂಸ ಬೇಯಿಸುವ ಮೂಲಕ ದತ್ತಪೀಠವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿದ್ದರು. ಇದರಿಂದ ಎಚ್ಚೇತುಗೊಂಡ ಜಿಲ್ಲಾಡಳಿತವು ತಾತ್ಕಾಲಿಕ ಶೆಡ್ ಅನ್ನು ಸ್ವಚ್ಛತೆ ಮಾಡಲಾಯಿತ್ತು.

ಇದಲ್ಲದೆ ಶ್ರೀರಾಮಸೇನೆ ಕಾರ್ಯಕರ್ತರು ಐಡಿ ಪೀಠಕ್ಕೆ ಭೇಟಿ ನೀಡಿ ಗುಹೆಗೆ ತೆರಳಿ ದತ್ತಾತ್ರೇಯ ದರ್ಶನ ಪಡೆದ್ದು. ನಂತರ ಪ್ರತಿವರ್ಷ ಶ್ರೀ ರಾಮಸೇನೆ ಕಾರ್ಯಕರ್ತರು ದತ್ತಜಯಂತಿ ಆಚರಣೆ ಮಾಡುವ ಅದೇ ತಾತ್ಕಾಲಿಕ ಶೆಡ್ ಹೋಮ ಮಂಟಪದಲ್ಲಿ ಮಾಂಸ ಭಕ್ಷಣೆ ಮಾಡಲಾಗಿತ್ತು. ಹಿನ್ನಲೆಯಲ್ಲಿ ಶುದ್ದಿಕರಿಸುವ ಕೆಲಸವನ್ನು ಮಾಡಿದರು. ಗೋ ಮೂತ್ರದ ಜೊತೆಗೆ ಗಂಗಾ-ಯಮುನ-ಸರಸ್ವತಿ ನದಿಯ ಸಂಗಮ ತೀರ್ಥದಿಂದ ಶುದ್ದಿಕರಿಸುವ ಕೆಲಸವನ್ನು ಮಾಡಿದರು.

ರಾಜ್ಯಾದ್ಯಂತ ಧರ್ಮ ಸಂಘರ್ಷ ನಡೆಯುತ್ತಿದೆ ಇದರ ನಡುವೆ ದೇಶದ ವಿವಾದಿತ ಕೇಂದ್ರ ಇನಾಂ ದತ್ತಾತ್ರೇಯ ಪೀಠದಲ್ಲಿ ಮಾಂಸದೂಟ ಪ್ರಕರಣ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಶುದ್ಧೀಕರಣಗೂಳಿಸಿದ ನಂತರ ಸ್ಥಳೀಯ ಅರ್ಚಕರಾದ ಯೋಗಿಶ್ ಶರ್ಮ ನೇತೃತ್ವದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರಿಂದ ಪೂಜೆಯನ್ನು ಮಾಡಿದರು.

ನಂತರ ಮಾತಾಡಿದ ಶ್ರೀ ರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಸರ್ಕಾರ, ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ವ್ಯಕ್ತಿಯಿಂದ ಮಾತ್ರ ಪೂಜೆಗೆ ಅವಕಾಶವಿದ್ದು ಮುಜರಾಯಿ ಕಮಿಷನರ್ ನೀಡಿದ ತೀರ್ಪಯೇ ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖವಾಗಿದೆ. 2010ರಲ್ಲಿ ಸುಪ್ರೀಂಕೋರ್ಟ್ ಕೂಡ 1999ರ ಪೂಜಾ ಪದ್ದತಿ ಪಾಲನೆಗೆ ಸೂಚನೆ ನೀಡಲಾಗಿದೆ. ಸರ್ಕಾರ ಜಿಲ್ಲಾಡಳಿತ ದಿಂದ ನೇಮಿಸಲ್ಪಟ್ಟ ಮುಜಾವರ್ ರವರಿಂದ ಮಾತ್ರ ದತ್ತಗುಹೆ, ಗೋರಿಗಳಿಗೆ ಪೂಜೆಗೆ ಅವಕಾಶವಿದ್ದು ಮುಜಾವರ್ ಪಾದುಕೆ, ಗೋರಿಗಳಿಗೆ ಪೂಜೆ ಸಲ್ಲಿಸುತ್ತಾರೆ. ಅನ್ಯ ವ್ಯಕ್ತಿಗಳಿಗೆ ಪೂಜಾ ಪುನಸ್ಕಾರಕ್ಕೆ ಅವಕಾಶವಿಲ್ಲ ಜೊತೆಗೆ ದತ್ತಜಯಂತಿ ಸಮಯದಲ್ಲಿ ಸ್ವಾಮೀಜಿಗಳಿಂದ ದತ್ತಪಾದುಕೆ ಪೂಜೆಗೆ ಅವಕಾಶಕ್ಕೆ ನೀಡುವಂತೆ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ನಡೆಸಿರುವ ನಿದೇರ್ಶನವೂ ಇದೆ. ಇದರ ಜೊತೆಗೆ ದತ್ತಪೀಠದಲ್ಲಿ ಮುಜರಾಯಿ ಇಲಾಖೆಯ ನಿಯಮದಂತೆ 200ಮೀಟರ್ ಸುತ್ತಮುತ್ತ ಯಾವುದೇ ಮಾಂಸಾಹಾರ ಮಾಡುವುದು ನಿಷೇಧವೂ ಜಾರಿಯಲ್ಲೂ ಇದ್ದರೂ ಬಿರಿಯಾನಿ ಭೀಕ್ಷಣೆ ಮಾಡಿರುವುದು ಜಿಲ್ಲಾಡಳಿತ ವೈಫಲ್ಯವೆಂದು ಕಿಡಿಕಾರಿದರು.

ಮುಂದಿನ ದಿನಗಳಲ್ಲಿ ಈ ರೀತಿ ಪ್ರಕರಣಗಳು ನಡೆದ್ರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು.

ಜಾಹಿರಾತು

LEAVE A REPLY

Please enter your comment!
Please enter your name here