ದರೋಡೆ ಪ್ರಕರಣ ಭೇದಿಸಿದ ಶಿರಾಳಕೊಪ್ಪ ಪೊಲೀಸರು…!ಮೂವರು ಆರೋಪಿಗಳ ಬಂಧನ

0
639

ಶಿಕಾರಿಪುರ: ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದ ದರೋಡೆ ಪ್ರಕರಣವನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸ್ ಇಲಾಖಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ಮುಖ್ಯ ಆರೋಪಿ ಶಿಕಾರಿಪುರ ಪಟ್ಟಣದ ಕುಂಟ ಅಲಿಯಾಸ್ ಕುಂಟ ಕುಮಾರ್ ಎಂದು ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಗಳಾದ ಕುಂಟ ಅಲಿಯಾಸ್ ಕುಂಟ ಕುಮಾರ (32) ಶಿಕಾರಿಪುರ, ದಾವಣಗೆರೆಯ ಸಂತೋಷ (30), ಹಾಗೂ ಇನ್ನೊಬ್ಬ ಆರೋಪಿ ವಸಂತ ಕುಮಾರ ಅಲಿಯಾಸ್ ವಸಂತ ಅಲಿಯಾಸ್ ಮಂಡಕ್ಕಿ (26) ಈ ಆರೋಪಿಗಳನ್ನ ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕೃಷ್ಣಮೂರ್ತಿ ಎಂಬುವವರು ಈತನ ಪರಿಚಯವಾಗಿದ್ದು ನನ್ನ ಹತ್ತಿರ ಚಿನ್ನ ಇದೆ ಹಣ ನೀಡಿದರೆ ಕೊಡುವುದಾಗಿ ನಂಬಿಸಿದ ಕುಂಟ ಕುಮಾರ್ ಶಿರಾಳಕೊಪ್ಪ ದೇವಿಕೊಪ್ಪ ಕಾಡಿನ ಹತ್ತಿರ ಬರಲು ಫೋನ್ ಮೂಲಕ ತಿಳಿಸಿದ್ದಾನೆ. ದಿ: 25-03 -2021 ಮಂಡ್ಯದ ಕೃಷ್ಣಮೂರ್ತಿ ತನ್ನ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದ ಮೇಲೆ ಶಿರಾಳಕೊಪ್ಪದ ದೇವಿಕೊಪ್ಫದ ಕಾಡಿಗೆ ಬಂದಿದ್ದು, ಅಲ್ಲಿ ಆರೋಪಿ ತನ್ನ ಐದು ಮಂದಿ ಸಹಚರರೊಂದಿಗೆ ಕಾದು ಕುಳಿತಿದ್ದ ಆರೋಪಿ ಕುಂಟ ಕುಮಾರ್ ಆತನ ಐದು ಜನ ಸಹಚರರು ಕೃಷ್ಣಮೂರ್ತಿಯವರ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರಲ್ಲದೆ ಅವರ ಬಳಿ ಇದ್ದ 1.30 ಲಕ್ಷ ರೂ. ಹಣವನ್ನು ಮತ್ತು ಅವರ ಬಳಿ ಇದ್ದ ಮೊಬೈಲ್, ಮತ್ತಾವರ ಕೊರಳಲ್ಲಿದ್ದ ರೋಡ್ ಗೋಲ್ಡ್ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಹಣವನ್ನು ಕಳೆದುಕೊಂಡ ಕೃಷ್ಣಮೂರ್ತಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳಾದ ಕುಂಟ ಕುಮಾರ ಮತ್ತು ಅವನ ಸಹಚರರು ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ದರೋಡೆ ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ಶಿವಮೊಗ್ಗದ ಶೇಖರ್ ಹೆಚ್ ಟಿ. ಹೆಚ್ಚುವರಿ ಪೋಲಿಸ್ ಅಧಿಕಾರಿಗಳು ತಾಲ್ಲೂಕಿನ, ಡಿ.ವೈ ಎಸ್.ಪಿ. ಶಿವಾನಂದ ಮದರಕಂಡಿ ಮಾರ್ಗದರ್ಶನದಲ್ಲಿ ಸಿ.ಪಿ.ಐ ಗುರುರಾಜ್ ಎನ್ ಮೈಲಾರಿ, ಶಿರಾಳಕೊಪ್ಪದ ಪಿಎಸ್ಐ ರಮೇಶ್.ಟಿ, ಶಿರಾಳಕೊಪ್ಪ ಪೋಲಿಸ್ ಠಾಣೆಯ ಶಿಬ್ಬಂದಿಗಳಾದ ಹೆಚ್.ಸಿ. ಕೊಟ್ರೇಶಪ್ಪ, ಮಂಜುನಾಥ, ಅಶೋಕ, ಪ್ರಭುಗೌಡ, ವಿಶ್ವನಾಥ, ನಾಗರಾಜ, ಆದರ್ಶ, ಹಾಗೂ ಕಾಂತೇಶ್, ತನಿಖೆಯ ತಂಡ ಕಾರ್ಯಾಚರಣೆ ನಡೆಸಿತ್ತು.

ಜಾಹಿರಾತು

LEAVE A REPLY

Please enter your comment!
Please enter your name here