ದಸಂಸ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ | ಸೊಪ್ಪಿನಮಲ್ಲೆ ಗ್ರಾಮಸ್ಥರಿಂದ ತಹಶೀಲ್ದಾರ್‌ಗೆ ಮನವಿ

0
1356

ಹೊಸನಗರ: ಜಿಲ್ಲೆಯ ಬೇರೆ ಬೇರೆ ತಾಲೂಕಿನಿಂದ ಆಗಮಿಸಿರುವ ದಲಿತ ಸಂಘರ್ಷ ಸಮಿತಿಯ ಸದಸ್ಯರು ಕ್ಷುಲ್ಲಕ ಕಾರಣಕ್ಕೆ ತಮ್ಮ ಕುಟುಂಬದ ವಿರುದ್ಧ ದೌರ್ಜನ್ಯ ನಡೆಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕಿನ ಮಾರುತಿಪುರ ಸಮೀಪದ ಸೊಪ್ಪಿನಮಲ್ಲೆ ಗ್ರಾಮದ ಸಂತೋಷ ಎಂಬುವವರು ತಹಶೀಲ್ದಾರ್ ವಿ.ಎಸ್ ರಾಜೀವ್‌ರವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ತಮ್ಮ ಮನೆಯ ಸಮೀಪ ದಲಿತ ಸಮುದಾಯಕ್ಕೆ ಸೇರಿದ ಚಂದ್ರಪ್ಪ, ಬಂಗಾರಮ್ಮ ಎಂಬುವವರು ನೂರಾರು ವರ್ಷಗಳಿಂದ ಇದ್ದ ಓಡಾಡುವ ದಾರಿಯಲ್ಲಿ ಅಡಿಕೆ ತೋಟ ನಿರ್ಮಾಣ ಮಾಡಿದ್ದರು. ಇದರಿಂದ ತಮಗೆ ತೊಂದರೆಯಾಗುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ, ಪರ ಊರುಗಳಿಂದ ದಲಿತ ಸಂಘರ್ಷ ಸಮಿತಿ ಸದಸ್ಯರು ಎಂದು ಹೇಳಿಕೊಂಡು ಬಂದವರು ತಮ್ಮ ಹಾಗೂ ಕುಟುಂಬದ ವಿರುದ್ಧ ದೌರ್ಜನ್ಯ ಎಸಗಿದ್ದಾರೆ. ಸ.ನಂ.7ರಲ್ಲಿರುವ ಕೆರೆಯ ಚಾನಲ್‌ಗೆ ಹಾನಿ ಮಾಡಿದ್ದು, ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ರಸ್ತೆ ಸಂಚಾರಕ್ಕೆ ಅಡ್ಡಿ ಮಾಡಿರುವುದೂ ಅಲ್ಲದೇ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಕಾರಣವಾಗಿರುವ ದಲಿತ ಸಂಘರ್ಷ ಸಮಿತಿ ಸದಸ್ಯರು ಹಾಗೂ ಭೂ ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ವೇಳೆ ಸಂತೋಷ, ಅಶೋಕಗೌಡ, ಕಲಾವತಿ, ಸುಶೀಲ, ನಾಗರಾಜ, ಯಶಾನಂದಗೌಡ, ಮಂಜಪ್ಪ, ಮೋಹನ, ನಾಗಾರ್ಜುನ, ಬಸವರಾಜಗೌಡ, ನಾಗೇಂದ್ರಆಚಾರ್, ಲಿಂಗಪ್ಪಗೌಡ ಮತ್ತಿತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here