ಹೊಸನಗರ: ದಾನ ಮಾಡುವ ಕೈಗಳಿಗೆ ದೇವರು ಶಕ್ತಿ ನೀಡಿದರೇ ತಾವು ದುಡಿದಿರುವ ಹಣದಲ್ಲಿ ಅಲ್ಪ ಪ್ರಮಾಣದಲ್ಲಿಯಾದರೂ ದಾನ ಮಾಡುತ್ತಾರೆ ಎಂದು ಹೊಸನಗರ ಬಾಲಾಜಿ ಗ್ಯಾಸ್ ಏಜೆನ್ಸಿ ಜಗದೀಶ್ರವರು ಹೇಳಿದರು.
ತಾಲ್ಲೂಕಿನ ನಿವಣೆ ಗ್ರಾಮದ ಕಲಾನಾಥೇಶ್ವರ ದೇವಸ್ಥಾನಕ್ಕೆ ಪ್ರಸಾದ ತಯಾರಿಸಲು ದೇವರಿಗೆ ಸಮರ್ಪಣೆಗೆ ಗ್ಯಾಸ್ ಸಿಲಿಂಡರ್ ಮತ್ತು ಒಲೆ, ರೆಗ್ಯುಲೇಟರ್, ಲೈಟರ್, ಹೊಸ್ ಪೈಪ್ ಸೇರಿದಂತೆ ಪೂರ್ಣ ಗ್ಯಾಸ್ ಸೆಟ್ ಅವಶ್ಯಕತೆಯಿದ್ದು ಅದನ್ನು ದೇವಸ್ಥಾನಕ್ಕೆ ದೇವಸ್ಥಾನದ ಆವರಣದಲ್ಲಿ ಕೊಡುಗೆಯಾಗಿ ನೀಡಿ ಮಾತನಾಡಿದರು.
ದುಡಿಯುವ ಕೈಗಳಿಗೆ ಶಕ್ತಿ ನೀಡುವ ಜೊತೆಗೆ ಉತ್ತಮ ಆರೋಗ್ಯವನ್ನು ನೀಡಬೇಕು ಹಾಗೂ ತಾವು ದುಡಿದ ಹಣದಲ್ಲಿ ಅಲ್ಪ ಪ್ರಮಾಣದಲ್ಲಿಯಾದರೂ ದಾನ ಮಾಡುವ ಮನಸ್ಸು ನೀಡಬೇಕು ಎಂದಾಗ ಮಾತ್ರ ಈ ಭೂಮಿಯ ಮೇಲೆ ಮನುಷ್ಯರಾಗಿ ಹುಟ್ಟಿರುವುದಕ್ಕೂ ಸಾರ್ಥಕವಾಗುತ್ತದೆ. ಪ್ರತಿಯೊಂದು ಹುಲ್ಲು ಕಡ್ಡಿಯು ಸಹ ಅಲುಗಾಡಲು ದೇವರ ದಯೆ ಇದ್ದರೆ ಮಾತ್ರ ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ದೇವರನ್ನು ನಂಬಿ ತಮ್ಮ ದಿನನಿತ್ಯದ ಕೆಲಸ ಮಾಡಲು ದೇವರನ್ನು ಪ್ರಾರ್ಥಿಸಿ ಕೆಲಸ ಆರಂಭಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವಣೆ ಕಲಾನಾಥೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ನಿವಣೆ ಸುಬ್ಬಾಭಟ್, ಅರ್ಚಕರಾದ ಪಾಂಡುರಂಗಭಟ್, ವಿನುತಾ ಜಗದೀಶ್, ಬಾಲಾಜಿ ಗ್ಯಾಸ್ ಕಚೇರಿಯ ಮ್ಯಾನೇಜರ್ ಪ್ರವೀಣ್, ಪರ್ತ್ರಕರ್ತ ಹೆಚ್.ಎಸ್.ನಾಗರಾಜ್, ಗ್ರಾಮಸ್ಥರಾದ ವಾಸುದೇವ, ಸೀತಾರಾಮ್ ಆಚಾರ್, ಕುಸುಮಮ್ಮ, ಹೇಮಂತ್, ಸಹನಾ, ವರ್ಷಿತ್, ಜಸ್ವಿಕಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Related