ದೀರ್ಘಾಯುಷಿ ಹುಲಿ ‘ಹನುಮ’ ಇನ್ನಿಲ್ಲ !

0
393

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ರಾಜ್ಯದಲ್ಲೆ ದೀರ್ಘಾಯುಷಿ ಎಂಬ ಖ್ಯಾತಿಗೆ ಒಳಗಾಗಿದ್ದ ಹುಲಿ ‘ಹನುಮ’ ಅನಾರೋಗ್ಯದಿಂದ ಮೃತಪಟ್ಟಿದೆ.

ಸುಮಾರು 20 ವರ್ಷದ ಹಿಂದೆ ಜನ್ಮತಾಳಿದ್ದ ಈ ಹುಲಿಯು ಕೆಲ ತಿಂಗಳಿನಿಂದ ಅನಾರೋಗ್ಯದಿಂದ ಬಳಲುತಿತ್ತು. ಲಯನ್ ಸಫಾರಿಯಲ್ಲಿ ಅತಿಹೆಚ್ಚು ದಿನ ಬದುಕಿದ ಗಂಡು ಹುಲಿ ಎಂಬ ದಾಖಲೆಯನ್ನು ಹನುಮ ಬರದಿದೆ. ವಾಲಿ ಹಾಗೂ ರಾಮ ಹನುಮನ ಸೋದರರು. ಈ ಎರಡು ಹುಲಿಗಳು ಈ ಮೊದಲೇ ಸಾವನ್ನಪ್ಪಿವೆ. 18 ವರ್ಷಗಳ ಕಾಲ ಅವುಗಳು ಬದುಕಿದ್ದವು.

ಮಲೇಶಂಕರ, ಚಾಮುಂಡಿಯ ಮಗ ಹನುಮ ಮಲೇಶಂಕರ ಹಾಗೂ ಚಾಮುಂಡಿ ನಡುವಿನ ಮೇಟಿಂಗ್ನಿಂದಾಗಿ ರಾಮ, ವಾಲಿ, ಹನುಮ ಜನಿಸಿದ್ದವು. ಲಯನ್ಸ ಸಫಾರಿಯಲ್ಲಿಯೇ ಹುಟ್ಟಿದ್ದ ಇವುಗಳನ್ನ ನೋಡಲೇಂದೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಪ್ರವಾಸಿಗರು ಬರುತ್ತಿದ್ದರು. ಹನುಮ ತನ್ನ ಹಾವಭಾವಗಳಿಂದಲೇ ಜನರಿಗೆ ಇಷ್ಟವಾಗುತ್ತಿದ್ದ.

ಹನುಮನ ಸಾವಿನಿಂದಾಗಿ ಲಯನ್ ಸಫಾರಿಯಲ್ಲಿ ಹುಲಿಗಳ ಸಂಖ್ಯೆ ನಾಲ್ಕಕ್ಕೆ ಇಳಿದಿದೆ. ಕೇವಲ ಎರಡುವರೆ ವರ್ಷದಲ್ಲಿ ರಾಮ, ವಾಲಿ, ಭರತ ಹಾಗೂ ಈಗ ಹನುಮ ಸಾವನ್ನಪ್ಪಿದೆ.

ಜಾಹಿರಾತು

LEAVE A REPLY

Please enter your comment!
Please enter your name here